ಮಹಿಳೆ-ಆರೋಗ್ಯ

5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಈ ಕಾಯಿಲೆಗಳು ಬರುತ್ತೆ ಎಚ್ಚರ..!

ನ್ಯೂಸ್ ನಾಟೌಟ್ : ಮನುಷ್ಯನಿಗೆ ಬಹುಮುಖ್ಯವಾಗಿ ಬೇಕಾದ್ದು ನಿದ್ದೆ. ಪ್ರತಿನಿತ್ಯ 7 ರಿಂದ 9 ತಾಸು ಉತ್ತಮ ನಿದ್ದೆ ಬೇಕಾಗುತ್ತದೆ. ನಿದ್ರೆ ಸರಿಯಾಗಿ ಆದರೆ ಮಾತ್ರ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಜೊತಗೆ ನಮ್ಮ ಭಾವನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

ಮಾನಸಿಕವಾಗಿ ದಣಿಯುತ್ತೀರಿ ಜೊತೆಗೆ ಮುಂಗೋಪ, ಇಡೀ ದಿನ ಕಿರಿಕಿರಿಯಂತಹ ಸಮಸ್ಯೆಗಳು ಎದುರಾಗುತ್ತದೆ. ಕೆಲವರು ಕೆಲಸದ ಒತ್ತಡದಿಂದ ನಿದ್ದೆ ಮಾಡುವುದು ಕಡಿಮೆಗೊಳಿಸುತ್ತಾರೆ. ಇದರಿಂದ ದೇಹದ ಮೇಲೆ ಭಾರೀ ಪ್ರಮಾಣದ ಕಾಯಿಲೆಗಳು ಉಂಟಾಗುತ್ತದೆ. ಮಕ್ಕಳು ,ವಯಸ್ಸಾದವರು ಕಡಿಮೆ ಕಾಲ ನಿದ್ರಿಸುವುದರಿಂದ ಮಲ್ಟಿಮಾರ್ಬಿಡಿಟಿಯ ಸಮಸ್ಯೆಯು ಶೇ.೩೦ ರಿಂದ ೪೦ ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ನಿದ್ರೆ ಮಾಡದಿರುವುದರಿಂದ ಬರುವ ಕಾಯಿಲೆಗಳು :

ಕೇಂದ್ರ ನರಮಂಡಲವು ದೇಹದ ಪ್ರಾಥಮಿಕ ಮಾಹಿತಿಯ ಹೆದ್ದಾರಿಯಾಗಿದೆ. ಇದು ಸರಿಯಾಗಿ ಕೆಲಸ ಮಾಡಲು ನಿದ್ದೆ ಅವಶ್ಯವಿರುತ್ತದೆ. ಆದರೆ ತೀವ್ರವಾದ ನಿದ್ರಾಹೀನತೆಯಿಂದಾಗಿ ನರಮಂಡಲದಲ್ಲಿ ಪ್ರಮುಖ ತೊಂದರೆ ಆಗುತ್ತದೆ.

ನಿದ್ರಾಹೀನತೆಯಿಂದ ನಿಮ್ಮ ದೇಹವು ರೋಗ ನಿರೋಧಕಶಕ್ತಿಯನ್ನು ಬಲಪಡಿಸುವುದನ್ನು ನಿಲ್ಲಿಸುತ್ತದೆ. ಹಾಗೂ ದೇಹವು ಅಸ್ವಸ್ಥ ಸ್ಥಿತಿಗೆ ಬರುತ್ತದೆ. ರಕ್ತ ಹೀನತೆ ಕಡಿಮೆ ಆಗುತ್ತದೆ. ನೀವು ಪ್ರತಿನಿತ್ಯ ಸಾಕಷ್ಟು ನಿದ್ದೆಯನ್ನು ಪಡೆಯದಿದ್ದರೆ, ನಿಮ್ಮ ದೇಹವು ಸೋಂಕು ಹಾಗೂ ಬ್ಯಾಕ್ಟಿರಿಯಾ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ರೋಗದಿಂದ ಚೇತರಿಸಿಕೊಳ್ಳಲು ಅಧಿಕ ಸಮಯ ಬೇಕಾಗುತ್ತದೆ.

ರಾತ್ರಿ ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ ಶೀತ ಹಾಗೂ ಜ್ವರದ ಸಮಸ್ಯೆಯಿಂದ ಬಳಲುವ ಪರಿಸ್ಥಿತಿ ಬರಬಹುದು. ಇದರಿಂದಾಗಿ ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳು ಎದುರಾಗಬಹುದು.

ನಿದ್ದೆ ಕಡಿಮೆ ಮಾಡುವುದರಿಂದ ಕೆಲವೊಮ್ಮೆ ನೀವು ವ್ಯಾಯಾಮ ಮಾಡುವಾಗ ಆಯಾಸವಾಗುತ್ತದೆ. ಇದರಿಂದಾಗಿ ತೂಕವು ಹೆಚ್ಚಾಗುತ್ತದೆ ಜೊತೆಗೆ ಜಿರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀಳುತ್ತದೆ.

ಸಾಕಷ್ಟು ನಿದ್ದೆ ಮಾಡದಿದ್ದರೆ ಜನರು ಹೃದಯ ರಕ್ತನಾಳದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.ಒಂದು ಅಧ್ಯಯನದ ಪ್ರಕಾರ ನಿದ್ರಾಹೀನತೆಯಿಂದಾಗಿ ಹೃದಯಾಘಾತ ಮತ್ತು ಸ್ಟ್ರೋಕ್ನಂತಹ ಕಾಯಿಲೆಗಳು ಎದುರಾಗುವ ಸಂಭವವಿರುತ್ತದೆ.

Related posts

ಸಂಗೀತ ಕಾರ್ಯಕ್ರಮ ನಡೆಸುತ್ತಿರುವಾಗ ವೇದಿಕೆಯಲ್ಲಿ ನೋವಿನಿಂದ ಒದ್ದಾಡಿದ ಖ್ಯಾತ ಗಾಯಕ..! ಸೋನು ನಿಗಮ್ ಆಸ್ಪತ್ರೆಗೆ ದಾಖಲು..!

ಹೃದಯಾಘಾತವಾಗುವ ಮುನ್ನ ತಪ್ಪದೆ ಈ ಮುನ್ನೆಚ್ಚರಿಕೆ ವಹಿಸಿ

ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಹೆಚ್ಚಾಗುತ್ತಿದೆ ಆತಂಕ..! ಕೋರ್ಟ್ ಮುಂದೆ ಸತ್ಯ ಒಪ್ಪಿಕೊಂಡ ಸಂಸ್ಥೆ..!ವೈದ್ಯರು ಈ ಬಗ್ಗೆ ಹೇಳಿದ್ದೇನು..?