ದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಎಸಿ ಅಳವಡಿಸುವಂತೆ ನಿದ್ರಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಉತ್ತರ ಭಾರತದ ಹಲವೆಡೆ ತಾಪಮಾನ ಹೆಚ್ಚಳವಾಗಿದೆ. ಈ ನಡುವೆ ಬಿಸಿಲಿನ ತಾಪದಿಂದ ಬೇಸತ್ತ ಅಮೃತಸರದ ಐಐಎಮ್‍ನ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿ ಎಸಿ ಅಳವಡಿಸುವಂತೆ ಆಗ್ರಹಿಸಿ ಮೆಸ್‍ನಲ್ಲಿ ವಿನೂತನವಾಗಿ ನಿದ್ರಿಸಿ ಪ್ರತಿಭಟನೆ ನಡೆಸಿದ್ದಾರೆ. ಕಳೆದ 2 ದಿನಗಳಿಂದ ಅಮೃತಸರದಲ್ಲಿ ಗರಿಷ್ಠ ತಾಪಮಾನ 44.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. (sleep protest)

ವಿದ್ಯಾರ್ಥಿಗಳ ಈ ಪ್ರತಿಭಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವಿದ್ಯಾರ್ಥಿಗಳು ಕುರ್ಚಿ ಮೇಲೆ ಕುಳಿತು, ಟೇಬಲ್ ಮೇಲೆ ತಲೆ ಇರಿಸಿಕೊಂಡು ನಿದ್ರಿಸುವ ರೀತಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಹಾಸ್ಟೆಲ್‍ನ ಸೌಲಭ್ಯಗಳನ್ನು ಒದಗಿಸುವ ಹಾಗೂ ನಿರ್ವಹಣೆಯ ವೈಫಲ್ಯದ ವಿರುದ್ಧ ಮೌನ ಪ್ರತಿಭಟನೆಯ ಸಂಕೇತವಾಗಿ ವಿದ್ಯಾರ್ಥಿಗಳು ಈ ರೀತಿ ಪ್ರತಿಭಟಿಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷವೂ ವಿದ್ಯಾರ್ಥಿಗಳು ಈ ಬೇಡಿಕೆಯನ್ನು ಮುಂದಿಟ್ಟಿದ್ದರು. ಆದರೆ ಹಾಸ್ಟೆಲ್‍ ಅನ್ನು ತಾತ್ಕಾಲಿಕ ವಸತಿಗೃಹದಲ್ಲಿ ನಡೆಸಲಾಗುತ್ತಿದ್ದು, ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೆ ಈ ಸಮಸ್ಯೆ ಬಗೆಹರಿಸಬಹುದು ಎನ್ನಲಾಗಿದೆ.

Click 👇

https://newsnotout.com/2024/06/darshan-and-gang-issue-gold-kannada-news
https://newsnotout.com/2024/06/hair-cutting-shop-owner-misbehaviour-police-issue
https://newsnotout.com/2024/06/viral-news-company-interview-kannada-news
https://newsnotout.com/2024/06/darshan-and-gang-issue-accued-and-his-father-nomore

Related posts

ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ತಂದೆ..! ಪತಿಯನ್ನು ಕೊಂದು, ತುಂಡರಿಸಿ ಕೃಷಿಭೂಮಿಗೆ ಎಸೆದ ಪತ್ನಿ..!

‘ಶ್ವಾನ ನಿಷ್ಠೆ’ಗೆ ದೇವಾಸ್ಥಾನವನ್ನೇ ಕಟ್ಟಿದರು-ಇಲ್ಲಿ ನಾಯಿಯೇ ದೇವರು

‘ಖುಷಿ..ದರ್ಶನ್ ಮಗಳೆಂದು ಹೇಳಿಲ್ಲ, ನನಗೂ ಕಾನೂನು ಹೋರಾಟ ಮಾಡುವ ಹಕ್ಕಿದೆ’ ಇನ್ಸ್ಟಾದಲ್ಲಿ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿಗೆ ಪವಿತ್ರಾ ಗೌಡ ಎಚ್ಚರಿಕೆ..!