ದೇಶ-ಪ್ರಪಂಚ

ಇನ್ನು ಮುಂದೆ ಕೇರಳದ ಈ ಶಾಲೆಯಲ್ಲಿ ‘ಸರ್’ ‘ಮೇಡಂ’ ಸಂಬೋಧನೆ ಇಲ್ಲ!

ತಿರುವನಂತಪುರ: ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾನುಸಾರ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ಥ ಧೋರಣೆ ಅನುಸರಿಸಲು ಕೇರಳದ ಶಾಲೆಯೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ‘ಸರ್’ ಅಥವಾ ‘ಮೇಡಂ’ ಬದಲು ‘ಶಿಕ್ಷಕ’ ಎಂದು ಸಂಬೋಧಿಸುವುದನ್ನು ಕಡ್ಡಾಯಗೊಳಿಸಿದೆ.

ಕಳೆದ ಹಲವು ದಶಕಗಳಿಂದಲೂ ಭಾರತೀಯ ಶಿಕ್ಷಣ ಪದ್ದತಿಯಲ್ಲಿ ಪುರುಷ ಅಧ್ಯಾಪಕರನ್ನು ‘ಸರ್’ ಮತ್ತು ಮಹಿಳಾ ಶಿಕ್ಷಕಿಯರನ್ನು ‘ಮೇಡಂ’ ಅಥವಾ ‘ಮ್ಯಾಮ್’ ಎಂದು ಸಂಬೋಧಿಸಲಾಗುತ್ತದೆ. ಲಿಂಗ ಭೇದವಿಲ್ಲದೆ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ಥ ಧೋರಣೆ ಜಾರಿಗೆ ತಂದ ಕೇರಳದ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಪಾಲಕ್ಕಾಡ್ ಜಿಲ್ಲೆಯ ಒಲಶ್ಶೇರಿ ಗ್ರಾಮದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆ ಪಾತ್ರವಾಗಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

Related posts

ಅಮಿತ್ ಶಾ ರಾಜ್ಯಕ್ಕೆ ಆಗಮನ..!,ಅಮಿತ್ ಶಾ ಎದುರಲ್ಲೇ ಪ್ರೀತಂ ಗೌಡ – ಪ್ರತಾಪ್​ ಸಿಂಹ ನಡುವೆ ವಾಕ್ಸಮರ..!

ಡ್ರೋನ್ ಮೂಲಕ ಹೈಟೆಕ್‌ ಫುಡ್‌ ಡೆಲಿವರಿ ವ್ಯವಸ್ಥೆ..! ಇಲ್ಲಿದೆ ವಿಡಿಯೋ

ಪ್ರಿಯಕರನ ಮೇಲೆ ಆ್ಯಸಿಡ್​ ಎರಚಿದ ಯುವತಿ..! ಮದುವೆ ಮೆರವಣಿಗೆಯಲ್ಲಿದ್ದ ವರ ಆಸ್ಪತ್ರೆಗೆ ದಾಖಲು, ಇಲ್ಲಿದೆ ವಿಡಿಯೋ