ಕರಾವಳಿ

ತಿಂಗಳೊಳಗೆ ಹುಚ್ಚು ಹಿಡಿಸಿ ಬೀದಿಗೆ ತಂದು ನಿಲ್ಲಿಸುತ್ತೇನೆ: ಕೊರಗಜ್ಜನ ಅಭಯ ನುಡಿ, ವಿಡಿಯೋ ವೈರಲ್

366
Spread the love

ವಿಟ್ಲ: ತುಳುನಾಡಿನ ನಂಬುಗೆಯ ಹಿಂದೂಗಳ ಆರಾಧ್ಯ ದೈವವಾಗಿರುವ ಕೊರಗಜ್ಜನಿಗೆ ಅನ್ಯಧರ್ಮೀಯ ವ್ಯಕ್ತಿಯೊಬ್ಬ ಅಪಮಾನ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಇದೀಗ ನೇಮೋತ್ಸವದಲ್ಲಿ ಕೊರಗಜ್ಜ ಭಕ್ತರಿಗೆ ಅಭಯ ನುಡಿ ಕೊಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ.

ಶುಕ್ರವಾರ ರಾತ್ರಿ ನಡೆದ ಕೊರಗಜ್ಜನ ನೇಮೋತ್ಸವದಲ್ಲಿ ಭಕ್ತರೊಬ್ದರು ಕೊರಗಜ್ಜನಲ್ಲಿ ತಮ್ಮ ಮನಸ್ಸಿಗೆ ಘಟನೆಯಿಂದ ಆಗಿರುವ ನೋವಿನ ಬಗ್ಗೆ ಭಿನ್ನವಿಸಿದರು. ಆಗ ಅದಕ್ಕೆ ಉತ್ತರ ನೀಡಿದ ಕೊರಗಜ್ಜ, ಭಯಪಡಬೇಡಿ ನನ್ನನು ಹೇಗೆ ಮಂಕು ಮರಳು ಮಾಡಿ ನಿಲ್ಲಿಸಿದ್ದಾರೋ ಅವರನ್ನೂ ಹಾಗೆಯೇ ಮಂಕು ಮರಳು ಮಾಡಿ ಒಂದು ತಿಂಗಳ ಒಳಗಾಗಿ ಬೀದಿಯಲ್ಲಿ ನಿಲ್ಲಿಸುತ್ತೇನೆ ಎಂದು ತುಳುವಿನಲ್ಲಿ ನುಡಿದ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಟ್ಲದ ಸಾಲೆತ್ತೂರಿನಲ್ಲಿ ಮುಸ್ಲಿಂ ಧರ್ಮದ ಯುವಕನೊಬ್ಬ ತನ್ನ ಮದುವೆಯಲ್ಲಿ ಕೊರಗಜ್ಜನ ವೇಷ ಧರಿಸಿ ಬಹು ಸಂಖ್ಯಾತ ಹಿಂದೂ ಸಮುದಾಯಕ್ಕೆ ನೋವನ್ನುಂಟು ಮಾಡಿದ್ದಾನೆ. ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂ ಸಂಘಟನೆಗಳು ಒತ್ತಾಯ ಮಾಡಿವೆ. ಸ್ವತಃ ಮುಸ್ಲಿಂ ಸಂಘಟನೆಗಳು ಕೂಡ ಆತನ ಹೀನ ವರ್ತನೆಯನ್ನು ಖಂಡಿಸಿವೆ.

See also  ಮಂಗಳೂರು: ಡಿಸಿ ಕಚೇರಿ ಮೆಟ್ಟಿಲಲ್ಲಿ ಧರಣಿ ಕುಳಿತ ಬಿಜೆಪಿ ಶಾಸಕರು..! ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಧ್ಯ ಪ್ರವೇಶ
  Ad Widget   Ad Widget   Ad Widget   Ad Widget   Ad Widget   Ad Widget