ಕ್ರೈಂಬೆಂಗಳೂರುರಾಜಕೀಯರಾಜ್ಯವೈರಲ್ ನ್ಯೂಸ್

ಸಿದ್ದರಾಮಯ್ಯರನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿ ಎಂದ ಆರ್‌.ಟಿ.ಐ ಕಾರ್ಯಕರ್ತ..! ಲೋಕಾಯುಕ್ತ ಕಚೇರಿಗೆ ಬಂದು ಮತ್ತೆ ದೂರು ನೀಡಿದ ಸ್ನೇಹಮಹಿ ಕೃಷ್ಣ..!

ನ್ಯೂಸ್ ನಾಟೌಟ್: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಂಧಿಸಿ ಲೋಕಾಯುಕ್ತ ವಿಚಾರಣೆಗೆ ಒಳಪಡಿಸುವಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮನವಿ ಸಲ್ಲಿಸಿದ್ದಾರೆ.

ಸೋಮವಾರ(ಅ.14) ಮೈಸೂರಿನ ಲೋಕಾಯುಕ್ತ ಕಚೇರಿಗೆ ಬಂದು ಸ್ನೇಹಮಹಿ ಕೃಷ್ಣ, ಲೋಕಾಯುಕ್ತಕ್ಕೆ ಪತ್ರದ ಮೂಲಕ ಮನವಿ ಸಲ್ಲಿಕೆ ಮಾಡಿದ್ದಾರೆ. ಅಕ್ಟೋಬರ್‌ 10ರಂದು ವಾಟ್ಸಪ್‌ ಮೂಲಕ ಮನವಿ ಮಾಡಿದ್ದ ಸ್ನೇಹಮಯಿ ಕೃಷ್ಣ ಸೋಮವಾರ ಖುದ್ದು ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯರನ್ನು ವಿಚಾರಣೆಗೆ ಒಳಪಡಿಸಬೇಕು. ಅವರು ಸಾಕ್ಷಿಗಳ ನಾಶ ಮಾಡುತ್ತಿದ್ದಾರೆ. ಮುಚ್ಚಿಡುತ್ತಿದ್ದಾರೆ. ಭಾಷಣದಲ್ಲಿ ಪ್ರಚೋದನೆ ನೀಡುತ್ತಿದ್ದಾರೆ. ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ವಿಚಾರಣೆಗೆ ಒಳಪಡಿಸಿ, ಬಂಧಿಸಿ ಎಂದು ಮನವಿ ಮಾಡಿದ್ದಾರೆ.ಲೋಕಾಯುಕ್ತ ಕಚೇರಿಗೆ ಕೂಡಲೆ ಸಿಸಿಟಿವಿ ಅಳವಡಿಸಿ, ಕೆಪಿಸಿಸಿ ವಕ್ತಾರರು ಪದೇ ಪದೇ ಲೋಕಾಯುಕ್ತ ಕಚೇರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ದೂರಿದ್ದಾರೆ.

Click

https://newsnotout.com/2024/10/kiccha-sudeepa-bigboss-kananda-news-viral-news-kananda-news/
https://newsnotout.com/2024/10/darshan-bail-issue-to-verdict-kannada-news/

Related posts

ಸಂಪಾಜೆ ದರೋಡೆ ಪ್ರಕರಣ: ನಾಲ್ವರು ಪೊಲೀಸ್ ಬಲೆಗೆ

ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಮಗು ಮೃತ್ಯು,ಏನಿದು ಮನಕಲಕುವ ಘಟನೆ?

ರಕ್ಷಾ ಬಂಧನಕ್ಕೆ ತವರಿಗೆ ಹೋಗಲು ಹಠ ಹಿಡಿದ ಪತ್ನಿ..! ಗಂಡ-ಹೆಂಡತಿ ಜಗಳದಲ್ಲಿ ಹೆಂಡತಿಯ ಮೂಗನ್ನೇ ಕಚ್ಚಿ ತುಂಡರಿಸಿದ ಗಂಡ..! ಮುಂದೇನಾಯ್ತು..?