ಕ್ರೈಂರಾಜಕೀಯರಾಜ್ಯ

“ಹಿಂದೂ ಯುವತಿ ನೇಹಾ ಕೊಲೆ ಪ್ರಕರಣವನ್ನು ಬಿಜೆಪಿಯವ್ರು ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ”, ಸಿಎಂ ಸಿದ್ದರಾಮಯ್ಯ ಕಿಡಿ

ನ್ಯೂಸ್ ನಾಟೌಟ್: ಕೊಲೆಗಳು ಎಲ್ಲ ಕಾಲದಲ್ಲೂ ನಡೆದಿವೆ. ಹಾಗಂತ ಕಾನೂನನ್ನು ನಾವು ಲಘುವಾಗಿ ತೆಗೆದುಕೊಂಡಿಲ್ಲ, ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನೇಹಾ ಹಂತಕನನ್ನು ಬಂಧಿಸಿದ್ದೇವೆ, ಕಾನೂನು ಪ್ರಕಾರ ಶಿಕ್ಷೆಯನ್ನೂ ನೀಡುತ್ತೇವೆ. ಆದರೆ ಬಿಜೆಪಿಯವ್ರು ಮಾತ್ರ ಈ ಕೊಲೆ ಪ್ರಕರಣವನ್ನು ತೀರ ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ.

ಇದು ಅಕ್ಷಮ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದು, ಕಾನೂನು ಮೀರಿದವರಿಗೆ ಶಿಕ್ಷೆ ಆಗುತ್ತದೆ. ಆ ಪ್ರಕಾರವಾಗಿ ನಾವು ತೆಗೆದುಕೊಳ್ಳಬೇಕಿರುವ ಎಲ್ಲ ಕ್ರಮಗಳನ್ನು ಕಾನೂನು ಪ್ರಕಾರವಾಗಿ ತೆಗೆದುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಬಿಜೆಪಿಯವ್ರು ಅಪಪ್ರಚಾರ ಮಾಡಿಕೊಂಡು ರಾಜಕೀಯಕ್ಕೆ ಈ ಪ್ರಕರಣವನ್ನು ಬಳಸಿಕೊಂಡಿದ್ದಾರೆ. ಹಾಗೆ ಮಾಡುವುದಿದ್ದರೆ ಮಾಡಿಕೊಳ್ಳಲಿ ಎಂದು ತಿಳಿಸಿದರು. ಹುಬ್ಬಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ಶುಕ್ರವಾರ ಕಾರ್ಪೋರೇಟರ್ ಪುತ್ರಿಯ ಭೀಕರ ಹತ್ಯೆ ನಡೆದಿತ್ತು.

https://newsnotout.com/2024/04/neha-issue-and-rachita-ram-reaction/

Related posts

ಮುರುಘಾ ಶ್ರೀ ಮಾದರಿಯಲ್ಲೇ ಮತ್ತೊಬ್ಬ ಸ್ವಾಮೀಜಿ ಅರೆಸ್ಟ್..! ಆತ ಸ್ವಾಮೀಜಿಯ ಬಗ್ಗೆ ಬಾಯ್ಬಿಟ್ಟ ರಹಸ್ಯವೇನು..?

ಅಪರಿಚಿತ ಯುವತಿಯೊಂದಿಗೆ ಶಾಸಕನ ಚಾಟಿಂಗ್! ಬೆದರಿಕೆ ಬಂದ ಮೇಲೆ ತಿಳಿಯಿತು ಅದು ಯುವತಿಯಲ್ಲವೆಂದು! ಮುಂದೇನಾಯ್ತು..?

ನಟ ಫಹಾದ್ ಫಾಜಿಲ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಮಾನವ ಹಕ್ಕುಗಳ ಆಯೋಗ..! ಅಂದು ರಾತ್ರಿ ಆಸ್ಪತ್ರೆಯಲ್ಲೇನಾಗಿತ್ತು..?