ಕರಾವಳಿ

ಊರು ಬಿಟ್ಟರೂ ದೈವ ದೇವರು ಸಂಸ್ಕೃತಿಯನ್ನು ಮರೆಯದ ನಟಿ ಶಿಲ್ಪಾ ಶೆಟ್ಟಿ, ಊರಿನ ಜಾತ್ರಾಮಹೋತ್ಸವಕ್ಕೆ ಬಂದ ನಟಿಗೆ ಅದ್ದೂರಿ ಸ್ವಾಗತ

189

ನ್ಯೂಸ್ ನಾಟೌಟ್: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಗ್ಗೆ ಎಲ್ಲರಿಗೂ ಗೊತ್ತು. ಕರಾವಳಿಯ ಅಪ್ಪಟ ಪ್ರತಿಭೆ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿದರು. ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡರು. ಅಂತಹ ಮೇರು ನಟಿ ತನ್ನ ಸಿನಿಮಾಕ್ಕಾಗಿ ಊರು ಬಿಟ್ಟಿದ್ದರೂ ಸಂಸ್ಕೃತಿಯನ್ನು ಇಲ್ಲಿನ ದೈವ ದೇವರು ಆಚರಣೆಗಳನ್ನು ಎಂದಿಗೂ ಮರೆತಿಲ್ಲ ಅನ್ನೋದು ವಿಶೇಷ.

ಸದ್ಯ ಅವರು ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಮಂಗಳೂರಿಗೆ ಆಗಮಿಸಿದ್ದಾರೆ. ಸುರತ್ಕಲ್ ತಾಲ್ಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವದಲ್ಲಿ ಅವರು ಕುಟುಂಬ ಸಹಿತರಾಗಿ ಪಾಲ್ಗೊಂಡರು. ಈ ವೇಳೆ ಅವರನ್ನು ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.

See also  ಅರಂತೋಡು: ನೂತನ ಪ್ರಯಾಣಿಕರ ತಂಗುದಾಣ ಉದ್ಘಾಟನೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget