ನ್ಯೂಸ್ ನಾಟೌಟ್: ಬೆಳವಣಿಗೆ ಅನ್ನೋದು ಜನರ ಸಹಕಾರದಿಂದ ಆಗುತ್ತದೆ. ಅಂತೆಯೇ ಪಂಜದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜನಬೆಂಬಲದಿಂದಲೇ ಶತಮಾನದ ದಶಮಾನವನ್ನು ಯಶಸ್ವಿಯಾಗಿ ಪೂರೈಸಿದೆ.
111 ವರ್ಷದ ಇದುವರೆಗಿನ ಪ್ರಯಾಣದಲ್ಲಿ ಪಾರದರ್ಶಕ ಆಡಳಿತ, ರೈತರಿಗೆ ಸಲಹೆ, ಕೃಷಿ ಉಪಕರಣಗಳ ಮಾರಾಟ, ನುರಿತ ಆಡಳಿತ ಮಂಡಳಿಯ ಚಾಣಕ್ಯ ಕಾರ್ಯವೈಖರಿಯನ್ನು ಕಂಡಿದೆ. ಇದೇ ಕಾರಣದಿಂದ ಇಂದು ಪಂಜದ ರೈತರ ಮತ್ತು ಸದಸ್ಯರ ಮುಖದಲ್ಲಿ ಈ ಸಹಕಾರ ಸಂಘ ನವ ಚೈತನ್ಯವನ್ನು ತುಂಬಿಸಿದೆ. ಕೃಷಿಕರಿಂದಲೇ ತುಂಬಿರುವ ಊರಿನಲ್ಲಿ ಕೃಷಿಕರಿಗೆ ಬೆನ್ನೆಲುಬಾಗಿರುವ ಈ ಸೊಸೈಟಿ ಹತ್ತು ಹಲವಾರು ಜನಪರ ಯೋಜನೆಗಳನ್ನು ಹಾಕಿ ಮಾದರಿಯಾಗಿದೆ. ಜನಮನದಲ್ಲಿ ಅಚ್ಚೊತ್ತಿದೆ. ಈ ಕುರಿತ ವಿಶೇಷ ಗ್ರೌಂಡ್ ರಿಪೋರ್ಟ್ ಅನ್ನು ತೆರೆದಿಡುವಂತಹ ಕೆಲಸವನ್ನು ‘ನ್ಯೂಸ್ ನಾಟೌಟ್’ ಡಿಜಿಟಲ್ ಮಾಧ್ಯಮ ಮಾಡಿದೆ. ಈ ವರದಿಯ ಪೂರ್ಣ ಪಾಠ ಇಲ್ಲಿದೆ ಓದಿ..
ಸಂಘವು ಆಧುನಿಕ ವ್ಯವಸ್ಥೆಗೆ ಹಂತಹಂತವಾಗಿ ಒಗ್ಗಿಕೊಂಡಿದೆ. ಕಂಪ್ಯೂಟರ್ ಮೂಲಕ ಪ್ರತಿಯೊಂದು ಕೆಲಸವನ್ನು ನಿಭಾಯಿಸಲಾಗುತ್ತಿದೆ. ಸಂಘದ ಸದಸ್ಯರಿಗೆ ಕೃಷಿಕರಿಗೆ ಅಗತ್ಯ ಮಾಹಿತಿಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ಒಟ್ಟು 4936 ಸದಸ್ಯರನ್ನು ಹೊಂದಿದೆ. ಒಟ್ಟು 8.56 ಕೋಟಿ ರೂ. ಪಾಲು ಬಂಡವಾಳವನ್ನು ಸಂಗ್ರಹಿಸಿದೆ. ಇಷ್ಟೊಂದು ವ್ಯವಹಾರವನ್ನು ನಡೆಸುವ ಗುರಿಯನ್ನು ಮೊದಲೇ ಹೊಂದಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಈ ಸಾಧನೆ ಹೊರಹೊಮ್ಮಿದೆ. ಮಾತ್ರವಲ್ಲ ಒಟ್ಟು 50.82 ಕೋಟಿ ರೂ.ವನ್ನು ಠೇವಣಿ ಇಡಲಾಗಿದೆ. ಒಟ್ಟು ರೂ. 494.51 ಕೋಟಿ ರೂ.ಗಳ ವಾರ್ಷಿಕ ವ್ಯವಹಾರವನ್ನು ಮಾಡಲಾಗಿದೆ. ರೂ.1,81 ಕೋಟಿ ನಿವ್ವಳ ಲಾಭವನ್ನುಗಳಿಸಿಕೊಂಡಿದೆ. ಇದರಿಂದ ಶೇ.9ರಷ್ಟು ಡಿವಿಡೆಂಟ್ ವಿತರಿಸಲು ಸಾಧ್ಯವಾಗಿದೆ ಎಂದು ಸಂಘದ ಅಧ್ಯಕ್ಷರಾಗಿರುವ ಗಣೇಶ್ ಪೈ ಬಿ. ತಿಳಿಸಿದ್ದಾರೆ.
ರೈತರು ಸಂಘದ ಪ್ರಮುಖ ಆಧಾರ ಸ್ಥಂಭ. ಈ ಹಿನ್ನೆಲೆಯಲ್ಲಿ ರೈತರ ಹಿತ ಕಾಯುವ ಕೆಲಸವನ್ನೇ ಸಂಘ ಮಾಡಿಕೊಂಡು ಬಂದಿದೆ. ರೈತರು ಬೆಳೆಸಿದ ಬೆಳೆಗಳಿಗೆ ಉತ್ತಮ ಧಾರಣೆ ಸಿಗುವಂತಾಗಲು ಕೃಷಿ ಉತ್ಪನ್ನಗಳನ್ನು ಕಮಿಷನ್ ನೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. 271-19 ಟನ್ ಅಡಿಕೆ, 30.83 ಟನ್ ಕೊಕ್ಕೋ, 16.50 ಟನ್ ರಬ್ಬರ್ ಹಾಗೂ 4.13 ಟನ್ ಕಾಳು ಮೆಣಸು ಕ್ಯಾಂಪ್ಕೋ ಮೂಲಕ ಮಾರಾಟ ಮಾಡಲಾಗಿದೆ.
ಬಡ್ಡಿ ಸಹಾಯಧನ ಯೋಜನೆ, ಸ್ವಸಹಾಯ ಗುಂಪು ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಅಪಘಾತ ವಿಮಾ ಯೋಜನೆ, ಸಂಘದ ಸದಸ್ಯರಿಗೆ ಅಪಘಾತ ವಿಮಾ ಯೋಜನೆ, ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ, ವಿದ್ಯಾನಿಧಿ ಯೋಜನೆ, ಮರಣ ಸಾಂತ್ವಾನ ನಿಧಿ, ಅನಾರೋಗ್ಯ ಪೀಡಿತರಿಗೆ ಧನಸಹಾಯ ಸೇರಿದಂತೆ ಹಲವು ಯೋಜನೆಗಳು ಸದಸ್ಯರನ್ನು, ಕೃಷಿಕರನ್ನು ಸಕಾಲದಲ್ಲಿ ತಲುಪುತ್ತಿದೆ.
ನಮ್ಮ ಅವಧಿ ಅಂತ ಅಲ್ಲ ಇಲ್ಲಿನ ಆಡಳಿತ ನಡೆಸಿದ ಎಲ್ಲ ಅವಧಿಯಲ್ಲೂ ಉತ್ತಮ ಕಾರ್ಯಗಳು ನಡೆದಿದೆ. ಹಂತಹಂತವಾಗಿ ನಮ್ಮ ಸಂಘ ಬೆಳವಣಿಗೆ ಪಡೆದುಕೊಂಡಿರುವುದು ನಮಗೆ ಅತ್ಯಂತ ಖುಷಿಯಾಗುತ್ತದೆ. ಕೃಷಿಕರ, ಸದಸ್ಯರ ಸಹಕಾರ ನಮಗೆ ಕಾಲಕಾಲಕ್ಕೆ ಸಿಗುತ್ತಿದೆ. ಪ್ರತಿ ಗೆಲುವು ಕೂಡ ಅವರದ್ದೇ. ಆರ್ಥಿಕ ಶಿಸ್ತನ್ನು ನಾವು ಸರಿಯಾಗಿ ರೂಢಿಸಿಕೊಂಡಿದ್ದೇವೆ. ಇದರಿಂದ ಸಂಘವನ್ನು ಸರಿಯಾಗಿ ನಡೆಸುವುದಕ್ಕೆ ಸಾಧ್ಯವಾಯಿತು.