ಕರಾವಳಿ

ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ತಿರುವು: ಪ್ರಮುಖ ಆರೋಪಿಯ ಬಂಧನಕ್ಕಾಗಿ ಪಂಜುರ್ಲಿ ದೈವದ ಮೊರೆ ಹೋದ ಕುಟುಂಬಸ್ಥರು !

ನ್ಯೂಸ್ ನಾಟೌಟ್: ಕಾಪು ತಾಲೂಕಿನ ಪಂಗಾಳ ಶರತ್ ವಿ.ಶೆಟ್ಟಿ ಕೊಲೆಯಾಗಿ ತಿಂಗಳುಗಳೇ ಕಳೆದಿವೆ ಆದರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಂದಿಯ ಬಂಧನ ಆದರೂ ಪ್ರಮುಖ ಆರೋಪಿ ಯಾರೆಂಬುದು ಇನ್ನೂ ಗೊತ್ತಾಗಿಲ್ಲ. ಆದ್ದರಿಂದ ಕುಟುಂಬಸ್ಥರು ದೈವದ ಮೊರೆ ಹೋದ ಘಟನೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಂಗಾಳ ಗ್ರಾಮದಲ್ಲಿ ಮಾರ್ಚ್ ೨೩ರಂದು ನಡೆದಿದೆ.

ಶರತ್ ವಿ. ಶೆಟ್ಟಿ (42) ಪಾಂಗಾಳ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಿದ್ದರು. ಇವರು ಪಾಂಗಾಳ ಪಡುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮದಲ್ಲಿ ಪಾಲ್ಗೊಂಡಿದ್ದಾಗ ಮಾತುಕತೆಗೆಂದು ಕರೆದ ದುಷ್ಕರ್ಮಿಗಳು, ಬಳಿಕ ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಮುಖ ಆರೋಪಿ ಯಾರೆಂಬುದು ಇಲ್ಲಿ ತನಕ ಗೊತ್ತಾಗಲಿಲ್ಲ. ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಪತ್ತೆಯಾಗಬೇಕು ಎಂದು ನಿನ್ನೆ ರಾತ್ರಿ ಪಾಂಗಾಳದ ಮನೆಯಲ್ಲಿ ವರ್ತೆ ಪಂಜುರ್ಲಿ ನೇಮೋತ್ಸವವನ್ನು ಆಯೋಜಿಸಲಾಗಿತ್ತು. ಈ ವೇಳೆ ಶರತ್ ಶೆಟ್ಟಿ ಕೊಲೆ ಆರೋಪಿಗಳು ಪಾತಾಳದಲ್ಲಿ ಅಡಗಿ ಕುಳಿತರೂ ಹುಡುಕಿ ಕೊಡುತ್ತೇನೆ ಎಂದು ಪಂಜುರ್ಲಿ ದೈವವು ಅಭಯ ನುಡಿದಿದೆ. ಅಷ್ಟೇ ಅಲ್ಲದೆ ಶರತ್ ಶೆಟ್ಟಿ ಯಾವ ರೀತಿ ಸಾಯುವಂತಾಯಿತು ಅದೇ ರೀತಿ ಅವರನ್ನು ಸರ್ವನಾಶ ಮಾಡುವುದಾಗಿ ದೈವ ಭರವಸೆ ನೀಡಿದೆ.

Related posts

ಅಡ್ಕಾರು ಬಳಿ ತಡೆಗೋಡೆಗೆ ಗುದ್ದಿದ ಆಲ್ಟೋ ಕಾರು, ಕಾರು ಜಖಂ

ಅವಘಡಕ್ಕೆ ತುತ್ತಾಗಿ ದವಡೆ ತುಂಡರಿಸ್ಪಟ್ಟ ಅನಾಥ ಶ್ವಾನಕ್ಕೆ KVG ಆಂಬ್ಯುಲೆನ್ಸ್ ಚಾಲಕನ ಆಸರೆ, ಪ್ರಶಾಂತ್ ನಿಷ್ಕಲ್ಮಶ ಕಾರ್ಯಕ್ಕೆ ಭಾರೀ ಮೆಚ್ಚುಗೆ, ಇಲ್ಲಿದೆ ನೋಡಿ ಸಂಪೂರ್ಣ ವಿಡಿಯೋ

ಹೆಡ್​ ಕಾನ್ಸ್​ಟೇಬಲ್ ​ನಿಂದಲೇ ಇಲಾಖೆಯ ಗೌಪ್ಯ ಮಾಹಿತಿ ಸೋರಿಕೆ..! ಹಣ ಕೊಟ್ರೆ ಕೇಸ್ ಸಂಬಂಧಪಟ್ಟ ಮೊಬೈಲ್ ನಂಬರ್​, ಟವರ್ ಲೊಕೇಶನ್ ಎಲ್ಲ ಸಿಗುತ್ತೆ..!