ಕ್ರೀಡೆ/ಸಿನಿಮಾ

ವಿವಾದಕ್ಕೀಡಾಗಿದ್ದ ಪಠಾಣ್ ಸಿನಿಮಾ ಓಡಿದ್ದೇ ಸುಳ್ಳಾ?

ನ್ಯೂಸ್ ನಾಟೌಟ್: ‘ಬೇಷರಮ್‌ ರಂಗ್‌’ ಹಾಡಿನಿಂದ ಬಹು ಸಂಖ್ಯಾತ ಹಿಂದೂಗಳ ಭಾವನೆಗೆ ದಕ್ಕೆ ತಂದಿದ್ದಾರೆ ಅನ್ನುವ ಕಾರಣಕ್ಕೆ ಭಾರೀ ವಿವಾದಕ್ಕೀಡಾಗಿದ್ದ ಪಠಾಣ್‌ ಸಿನಿಮಾ ಬಿಡುಗಡೆಯಾದ ಕೆಲವೇ ದಿನಕ್ಕೆ ನೂರಾರು ಕೋಟಿ ಓಡಿದೆ ಎಂದು ಹೇಳುತ್ತಿರುವುದೇ ಸುಳ್ಳು ಅನ್ನುವ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ನಡುವೆ ಶಾರುಖ್‌ ಫ್ಯಾನ್ಸ್‌ ಹಾಗೂ ಇತರೆ ಸಿನಿಮಾ ಪ್ರಿಯರ ನಡುವೆ ಟ್ವಿಟ್ಟರ್‌ನಲ್ಲಿ ಟಾಕ್ ಸಮರವೇ ನಡೆಯುತ್ತಿದೆ.

ವಿವಾದಕ್ಕೆ ಗುರಿಯಾಗಿದ್ದ ಶಾರುಖ್‌, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ‘ಪಠಾಣ್‌’ ಹಲವು ದಾಖಲೆಗಳನ್ನು ಮುರಿದು 4 ದಿನದಲ್ಲಿ ವಿಶ್ವದಾದ್ಯಂತ ₹400 ಕೋಟಿ ಗಳಿಕೆ ಕಂಡಿದೆ. ಜ.25ರಂದು 8000 ಸ್ಕ್ರೀನ್‌ಗಳಲ್ಲಿ ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಪಠಾಣ್‌ ತೆರೆ ಕಂಡಿತ್ತು. ಹಿಂದಿ ಹೊರತಾಗಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಚಿತ್ರ ತೆರೆ ಕಂಡಿದೆ. ಮೊದಲ ದಿನವೇ ಹಿಂದಿ ಅವತರಣಿಕೆ ₹55 ಕೋಟಿ ಗಳಿಸಿದ್ದು, ಡಬ್ಬಿಂಗ್‌ ಭಾಷೆಗಳಿಂದ ₹2 ಕೋಟಿ ಸಂಗ್ರಹವಾಗಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್‌ರಾಜ್‌ ಫಿಲಂಸ್‌ ಹೇಳಿತ್ತು.‌ ಚಿತ್ರ ವಿಮರ್ಶಕ ತರಣ್‌ ಆದರ್ಶ್‌, ಚಿತ್ರವನ್ನು ಒಂದೇ ಸಾಲಿನಲ್ಲಿ ಬ್ಲಾಕ್‌ಬಸ್ಟರ್‌ ಎಂದು ಬಣ್ಣಿಸಿದ್ದು 4ನೇ ದಿನದ ಬಾಕ್ಸ್‌ ಆಫೀಸ್‌ ಲೆಕ್ಕಾಚಾರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪಠಾಣ್‌ ಭಾರತದಲ್ಲಿ ರು. 265 ಕೋಟಿ ಗಳಿಸಿದೆ. ಸಾಗರೋತ್ತರ ವಹಿವಾಟಿನಿಂದ 164 ಕೋಟಿ ಗಳಿಸಿದೆ ಎಂದು ತರಣ್‌ ಹಂಚಿಕೊಂಡಿದ್ದಾರೆ. ಇದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಪಠಾಣ್‌ ಚಿತ್ರದ ಕುರಿತಾದ ಅಪಪ್ರಚಾರ ಮಾತ್ರ ಮುಂದುವರಿದಿದೆ ಪಠಾಣ್‌ ಚಿತ್ರಕ್ಕೆ ಜನವಿಲ್ಲ, ಗಳಿಕೆ ಲೆಕ್ಕ ಸುಳ್ಳು ಎಂಬ ವರದಿಗಳು ಶೇರ್‌ ಆಗುತ್ತಿವೆ.

Related posts

ಕಾಂತಾರ ಸಿನಿಮಾದಲ್ಲಿ ನೀವೂ ನಟಿಸ್ತೀರಾ..? ಇಲ್ಲಿದೆ ಭರ್ಜರಿ ಅವಕಾಶ..! ‘ಹೊಂಬಾಳೆ ಫಿಲ್ಮ್’ ಹಂಚಿಕೊಂಡ ಪೋಸ್ಟರ್ ನಲ್ಲೇನಿದೆ?

ನಟ ಜಗ್ಗೇಶ್‌ ಆಯ್ತು ಈಗ ಕಿರಿ ಪುತ್ರ ಆಸ್ಪತ್ರೆಗೆ ದಾಖಲು! ಅಷ್ಟಕ್ಕೂ ನವರಸ ನಾಯಕ ಜಗ್ಗೇಶ್ ಪುತ್ರನಿಗೇನಾಯ್ತು?

ಮಾರ್ಚ್ 31 ರಿಂದ ಐಪಿಎಲ್ ಮೆಗಾ ಫೈಟ್‌..ಕುತೂಹಲ ಕೆರಳಿಸಿದ ಕೂಟದಲ್ಲಿ ಏನೇನಿದೆ ವಿಶೇಷ?