ಕೊಡಗುಸುಳ್ಯ

ಮಾಜಿ ಸಚಿವ, ಕೊಡಗಿನ ಹಿರಿಯ ರಾಜಕಾರಣಿ ಟಿ. ಜಾನ್ (92) ನಿಧನ

ನ್ಯೂಸ್ ನಾಟೌಟ್: ಮಾಜಿ ಸಚಿವ, ಕೊಡಗಿನ ಹಿರಿಯ ರಾಜಕಾರಣಿ ಕಾಂಗ್ರೆಸ್ ಮುಖಂಡ ಟಿ. ಜಾನ್ (92) ಬೆಂಗಳೂರಿನ ನಿವಾಸದಲ್ಲಿ ಶುಕ್ರವಾರ ಕೊನೆಯುಸಿರೆಳೆದರು.

ಮೂಲತಃ ಕೇರಳದವರಾದ ಜಾನ್‌ ಹಲವಾರು ವರ್ಷಗಳ ಹಿಂದೆ ಕೊಡಗಿಗೆ ಬಂದು ನೆಲೆಸಿದ್ದರು. ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. ರಾಜಕೀಯ ಮಾತ್ರವಲ್ಲದೆ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಸಂಸ್ಥೆಗಳು, ರೆಸಾರ್ಟ್‌ಗಳನ್ನು ಆರಂಭಿಸಿ ಯಶಸ್ಸು ಗಳಿಸಿದ್ದರು. ಕೊಡುಗೈ ದಾನಿ ಎಂದೆ ಖ್ಯಾತರಾಗಿದ್ದರು. ನಾಳೆ (ಫೆ.11) ಬೆಂಗಳೂರಿನಲ್ಲಿ ಜಾನ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

Related posts

ಸುಳ್ಯ: ಎನ್ನೆಂಸಿ ನೇಚರ್ ಕ್ಲಬ್ ವಾರ್ಷಿಕ ಚಟುವಟಿಕೆ ಉದ್ಘಾಟನೆ, ಸುಸ್ಥಿರ ಸಾವಯವ ಕೃಷಿ ಉಪನ್ಯಾಸ

ಸುಳ್ಯ: ಅಪಘಾತಕ್ಕೀಡಾಗಿ ನಿಂತಿದ್ದ ಅಗ್ನಿ ಶಾಮಕ ವಾಹನಕ್ಕೆ ಕೊನೆಗೂ ಸಿಕ್ಕಿತು ಮುಕ್ತಿ..! ಮೂರು ವರ್ಷಗಳ ನಂತರ ಆ ವಾಹನ ಗುಜುರಿ ಸೇರಿದ್ದೇಗೆ..?

ಮಂಗಳೂರು: ಕುಡಿಯುವ ನೀರಿಗಾಗಿ ಸಹಾಯವಾಣಿ..! ಇಲ್ಲಿದೆ ಸಂಪೂರ್ಣ ಮಾಹಿತಿ