ದೇಶ-ಪ್ರಪಂಚ

ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ,ಈಜಿ ಮೇಲೇರಿ ಪ್ರಾಣ ಉಳಿಸಿಕೊಂಡ 7 ವರ್ಷದ ಬಾಲಕಿ..!

ನ್ಯೂಸ್ ನಾಟೌಟ್ : ತಾಯಿಯೊಬ್ಬಳು ತನ್ನಿಬ್ಬರು ಹೆಣ್ಣು ಮಕ್ಕಳ ಜತೆ ಬಾವಿಗೆ ಹಾರಿದ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸೇಟ್ ದಿನ್ನೆ ಬಳಿ ನಡೆದಿದೆ. ಅದೃಷ್ಟವಶಾತ್​ ಓರ್ವ 7 ವರ್ಷ ಪ್ರಾಯದ ಹೆಣ್ಣು ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ತಾಯಿ ನಾಗಮ್ಮ (38) ಹಾಗೂ ಮಗಳು ಶ್ರೀನಿಧಿ (5) ದುರಂತ ಅಂತ್ಯ ಕಂಡವರು.ಗಂಗೋತ್ರಿ(7) ಬಾವಿಯಿಂದ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾಳೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹಗಳಿಗಾಗಿ ಆಗ್ನಿಶಾಮಕದಳ ಶೋಧ ಕಾರ್ಯ ನಡೆಸಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related posts

ಓದಿದ್ದು ಕೇವಲ 10ನೇ ಕ್ಲಾಸ್‌,ಈ ಯುವಕ ಕೋಟಿ ಕೋಟಿ ರೂ.ಗಳ ಒಡೆಯ..! ಸಂಪಾದಿಸಿದ ಅರ್ಧದಷ್ಟು ಹಣ ಸಮಾಜಕ್ಕೆ ದಾನ ಮಾಡಲು ನಿರ್ಧಾರ

ಭಾರತದ ಮಾನವ ಸಹಿತ ಬಾಹ್ಯಾಕಾಶ ಮಿಷನ್‌ ಗೆ ನಾಲ್ವರು ಆಯ್ಕೆ, ಮೋದಿಯಿಂದ ಅಭಿನಂದನೆ

ಮನೆ ನಿರ್ಮಾಣಕ್ಕಾಗಿ ಬಂದ ಸಾಲದ ಹಣ ಪಡೆದು ಪ್ರಿಯಕರನ ಜತೆ ಪರಾರಿಯಾದ ವಿವಾಹಿತ ಮಹಿಳೆಯರು!