ಕ್ರೈಂರಾಜ್ಯವೈರಲ್ ನ್ಯೂಸ್

ಹೈಸ್ಕೂಲ್ ಮಕ್ಕಳಿಂದ ಅಕ್ರಮ ಬಡ್ಡಿ ವ್ಯವಹಾರ..! ಅಪ್ರಾಪ್ತರು ಸೇರಿ 25 ವಿದ್ಯಾರ್ಥಿಗಳ ಬಂಧನ..!

ನ್ಯೂಸ್ ನಾಟೌಟ್: ಬಡ್ಡಿ ಸಾಲಕ್ಕೆ ಸಂಬಂಧಿಸಿದಂತೆ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಅಕ್ರಮ ಬಡ್ಡಿ ವ್ಯವಹಾರದಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವಶಕ್ಕೆ ಪಡೆದಿದ್ದಾರೆ.

ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ 25 ವಿದ್ಯಾರ್ಥಿ ದಂಧೆಕೋರರನ್ನು ಬಂಧಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಆಗಸ್ಟ್‌ 18ರಂದು ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿತ್ತು. 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗೆ 10ನೇ ತರಗತಿ ವಿದ್ಯಾರ್ಥಿ ಹಲ್ಲೆ ಮಾಡಿದ್ದರು. ಈಗ ನಾವು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ ಎಂದರು.

ವಿಚಾರಣೆ ವೇಳೆ ಕಿಡ್ನಾಪ್ ಮಾಡಿ, ವಾರದ ಬಡ್ಡಿ ಲೆಕ್ಕದ ಮೇಲೆ ಹಣಕ್ಕೆ ಬೇಡಿಕೆ ಇಟ್ಟಿರುವುದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಇಬ್ಬರು ಮೇಜರ್ ಹಾಗೂ ನಾಲ್ಕು ಜನ ಮೈನರ್ ಇದ್ದರು. ಅಪ್ರಾಪ್ತರನ್ನು ಬಾಲ ಅಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ, ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದಾಗ ಕೆಲವರು ಈ ಬಾಲಕರನ್ನು ಉಪಯೋಗಿಸಿಕೊಂಡು ಬಡ್ಡಿ ವ್ಯವಹಾರ ಮಾಡುತ್ತಿದ್ದರು. ದುಪ್ಪಟ್ಟು ಬಡ್ಡಿಗೆ ಹಣ ನೀಡಿ, ವಾಹನಗಳನ್ನು ಇಟ್ಟುಕೊಳ್ಳೋದು, ಬೆದರಿಕೆ ಹಾಕುವುದು ಸೇರಿ ಹಲವು ರೀತಿಯ ಕೃತ್ಯಗಳನ್ನು ಮಾಡುತ್ತಿರುವುದು ತಿಳಿದು ಬಂದಿದೆ. ಮುಂದುವರೆದು ಸುಮಾರು 10 ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Click

https://newsnotout.com/2024/08/bharath-shetty-get-fired-on-ivan-disoza-kannada-news-about-allegations/
https://newsnotout.com/2024/08/mangaluru-ivan-desoza-governer-house-stone-thrown/
https://newsnotout.com/2024/08/nivedhita-gowda-chandan-2-marriage-issue-blue-saree-kananda-news/
https://newsnotout.com/2024/08/bengal-tiger-tiger-women-viral-video-kannada-news-america/
https://newsnotout.com/2024/08/school-bus-under-fire-by-protester-kannada-news-viral-video-police-fir/
https://newsnotout.com/2024/08/shinde-house-demolish-by-people-kannada-news-viral-72-membars-under-custody/

Related posts

ಸುರತ್ಕಲ್: ಸಮುದ್ರ ತೀರದಲ್ಲಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಮೃತದೇಹ ಪತ್ತೆ..! ಆತ್ಮಹತ್ಯೆಯ ಶಂಕೆ..!

ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆ..? ಅಕ್ಟೋಬರ್​ 15ರ ವರೆಗೂ ತಮಿಳುನಾಡಿಗೆ ನೀರು ಬಿಡಲು ಮತ್ತೆ ಆದೇಶ!

19 ಬಾರಿ ಬೆನ್ನು ಮತ್ತು ಕಾಲಿಗೆ ಶಸ್ತ್ರಚಿಕಿತ್ಸೆ ಆಗಿರುವ ವಿಕಲಚೇತನ ಈಜು ಪಟುವಿಗೆ 100 ಅಂತಾರಾಷ್ಟ್ರೀಯ ಪದಕಗಳ ಸಂಭ್ರಮ, ಕೊರಗದಿರಿ..ಕೊರಗುತ್ತಾ ಕೂರದಿರಿ, ಪ್ರತಿಯೊಬ್ಬರಿಗೂ ಈ ಯುವಕನ ಬದುಕೇ ಸ್ಪೂರ್ತಿ