ಕ್ರೈಂವೈರಲ್ ನ್ಯೂಸ್ಶಿಕ್ಷಣ

ಶಾಲೆಗೆ ರಜೆ ಬೇಕೆಂದು ನೀರಿಗೆ ಇಲಿ ಪಾಷಾಣ ಹಾಕಿದನಾ ವಿದ್ಯಾರ್ಥಿ..? ಮುಂದೇನಾಯ್ತು..?

ನ್ಯೂಸ್‌ ನಾಟೌಟ್‌: ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮೂವರು ಮಕ್ಕಳು ನೀರು ಸೇವಿಸಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾಗಿದ್ದ ಮಕ್ಕಳನ್ನು ಕೋಲಾರದ (Kolar) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಂಗಾರಪೇಟೆ (Bangarpet) ತಾಲ್ಲೂಕು ಡೊಡ್ಡಪೊನ್ನಾಂಡಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏನಾದರು ತೊಂದರೆಯಾದರೆ ರಜೆ ಕೊಡುತ್ತಾರೆ. ನಂತರ ನಾನು ಊರಿಗೆ ಹೋಗಿ ತಂದೆ-ತಾಯಿಯನ್ನು ನೋಡಬಹದು ಎಂಬ ಕಾರಣಕ್ಕೆ ಒಂಬತ್ತನೇ ತರಗತಿ ವಿದ್ಯಾರ್ಥಿ ಶಾಲೆಯ ನೀರಿಗೆ ವಿಷ(ಇಲಿ ಪಾಷಾಣ) ಬೆರೆಸಿದ್ದ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿ ಮಾನಸೀಕ ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂಬ ವಿಷಯ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದ್ದು, ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ವಿದ್ಯಾರ್ಥಿಯ ತಂದೆ ಮತ್ತು ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ನಮ್ಮ ಮಗ ಚೆನ್ನಾಗಿ ಓದಲಿ ಎಂದು ಹಾಸ್ಟೆಲ್​ಗೆ ದಾಖಲು ಮಾಡಿದ್ದರು. ಆದರೆ ಮಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಹೀಗಾಗಿ ಈ ಕೃತ್ಯ ಎಸಗಿದದ್ದಾನೆ ಎನ್ನಲಾಗಿದೆ.

https://newsnotout.com/2023/11/ksrtc-cargo-service-news-kannada-news-f/

Follow us for more updates:

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

Related posts

ಸಿಎಂ ಮುಂದೆ 6 ನಕ್ಸಲರು ಶರಣಾಗತಿ, ಸಿದ್ದರಾಮಯ್ಯ ಜೊತೆ ನಕ್ಸಲರ ಸಭೆ..!

ಆನೆ ಕಾರ್ಯಾಚರಣೆ ತಂಡದ ಬಳಿ ಬಂದೂಕು ಇರಲಿಲ್ಲ ಎಂದ ವೈದ್ಯ..! ಹಾಗಾದ್ರೆ ಅರ್ಜುನ ಕೊನೆಯುಸಿರೆಳೆದದ್ದು ಹೇಗೆ..? ಸ್ಪೋಟಕ ಮಾಹಿತಿ ಬಿಚ್ಚಿಟ್ಟ ವನ್ಯಜೀವಿ ವೈದ್ಯ ಹೇಳಿದ್ದೇನು?

ವೇಶ್ಯಾವಾಟಿಕೆ ದಂಧೆಗೆ ಹೆಣ್ಣು ಮಕ್ಕಳಿಗೆ ಬ್ಲ್ಯಾಕ್ ಮೇಲ್‌: ಕಿಂಗ್ ಪಿನ್ ಹೆಂಡತಿ, ಗಂಡ ಅರೆಸ್ಟ್