ನ್ಯೂಸ್ ನಾಟೌಟ್ : ಈ ಬಾರಿಯ ಬಜೆಟ್ ನಲ್ಲಿ ಸಪ್ತ ಸೂತ್ರವನ್ನು ಅಳವಡಿಸಲಾಗಿದೆ. ಯುವ ಸಬಲೀಕರಣ, ಮಹಿಳಾ ಸಬಲೀಕರಣ, ಕೃಷಿ ಸ್ಟಾರ್ಟ್ ಅಪ್‌ಗಳಿಗೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ಬಡವರು, ಮಧ್ಯಮ ವರ್ಗದವರು ಹಾಗೂ ಕೃಷಿಕರನ್ನು ಒಳಗೊಂಡಂತೆ ರೂಪಿಸಲಾಗಿದೆ ಎಂದು ಬಜೆಟ್ ಮಂಡನೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೇಂದ್ರ ಸರ್ಕಾರದ ಅಂತ್ಯೋದಯ ಯೋಜನೆಯಡಿ ಡಿಸೆಂಬರ್ 2023ರವರೆಗೆ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಮುಂದುವರಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಭಾರತದ ಆರ್ಥಿಕತೆಲ್ಲಿ ಭಾರಿ ಪ್ರಗತಿ ಕಂಡಿದೆ. ದೇಶದ ಗೌರವ ಹೆಚ್ಚಿದೆ. ಕಳೆದ 9 ವರ್ಷಗಳಲ್ಲಿ 10ನೇ ಸ್ಥಾನಕ್ಕೆ ನಾವು ಬಂದು ತಲುಪಿದ್ದೇವೆ. ಭಾರತಕ್ಕೆ ಪ್ರಗತಿಶೀಲ ದೇಶ ಅನ್ನುವ ಗೌರವ ಸಿಕ್ಕಿದೆ.
ಕೋವಿಡ್ ನಂತಹ ಮಾರಕ ರೋಗ ದೇಶಕ್ಕೆ ಅಪ್ಪಳಿಸಿದಾಗ ಯಾರನ್ನೂ ನಾವು ಹಸಿವಿನಿಂದ ಬಳಲು ಬಿಡಲಿಲ್ಲ. ಸುಮಾರು 80 ಕೋಟಿ ಜನರಿಗೆ ಆಹಾರವನ್ನು ನೀಡಿದೆವು.
ಕೊವಿಡ್ ಸಂಕಷ್ಟ ಸಂದರ್ಭದಲ್ಲಿ ಯಾವುದೇ ಭಾರತೀಯರು ಹಸಿವಿನಿಂದ ಬಳಲಲು ಅವಕಾಶ ನೀಡಲಿಲ್ಲ. 80 ಕೋಟಿ ಜನರಿಗೆ ಆಹಾರ ಒದಗಿಸಲಾಯಿತು.
ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಬಜೆಟ್ ಭಾಷಣಕ್ಕೆ ಅಡ್ಡಿ ಪಡಿಸುವ ಪ್ರಯತ್ನ ನಡೆಸಿದರು. ಇದೇ ವೇಳೆ ಕಲವು ಸದಸ್ಯರು ಭಾರತ್ ಜೋಡೋ ಎಂದು ಘೋಷಣೆ ಕೂಗಿದರು.