ಕ್ರೀಡೆ/ಸಿನಿಮಾ

ಮಗುವಿಗೆ ಜನ್ಮ ನೀಡಿದ ಅದಿತಿ ಪ್ರಭುದೇವ..!ಯುಗಾದಿ ಹಬ್ಬದ ಶುಭಾಶಯ ತಿಳಿಸುತ್ತಾ ತಾಯಿಯಾಗಿರುವ ಸಂತಸ ಹಂಚಿಕೊಂಡ ನಟಿ

ನ್ಯೂಸ್‌ ನಾಟೌಟ್:‌ ಶುದ್ಧ ಕನ್ನಡದಲ್ಲಿ ಮಾತನಾಡುತ್ತಾ ಕನ್ನಡಿಗರ ಪ್ರೀತಿಯನ್ನು ಗೆದ್ದ ನಟಿ ಅದಿತಿ ಪ್ರಭುದೇವ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆಂದು ತಿಳಿದು ಬಂದಿದೆ.ಇತ್ತೀಚೆಗಷ್ಟೇ ಟ್ರೆಡಿಶನಲ್‌ ಆಗಿ ಸೀರೆಯುಟ್ಟು ಇಡೀ ಕನ್ನಡಿಗರ ಮನಸ್ಸು ಗೆದ್ದ ಬೆಡಗಿಯ ಫೋಟೋವೊಂದು ಭಾರಿ ವೈರಲ್‌ ಆಗಿತ್ತು.ಈ ಫೋಟೋ ನೋಡಿ ಅಭಿಮಾನಿಗಳು ಶುಭ ಹಾರೈಸಿದ್ದರು.ಮಾತ್ರವಲ್ಲ ಈ ವಿಡಿಯೋವನ್ನು ಕೂಡ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ ಲೋಡ್‌ ಮಾಡುತ್ತಾ, ಗರ್ಭಿಣಿ ಸಮಯದಲ್ಲಿ ಅವರು ಸೇವಿಸುವ ಆಹಾರ ಕ್ರಮಗಳ ಬಗ್ಗೆಯೂ ಆಗಾಗ ವಿವರಿಸುತ್ತಿದ್ದರು.

ನಟಿ ಅದಿತಿಯವರು ಏಪ್ರಿಲ್ 4ರಂದೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ತಮ್ಮ ಇನ್ಸ್ಟಾ ಖಾತೆಯ ಮೂಲಕ ಮಗುವಿನ ಜನನದ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಿನ ಕೈ ತಾನು ಹಾಗೂ ಪತಿ ಯಶಸ್ ಕೈ ಮೇಲಿರುವ ಚಿತ್ರ ಹಂಚಿಕೊಂಡಿರುವ ನಟಿ, ‘ನಮ್ಮನೆ ಮಹಾಲಕ್ಷ್ಮಿ’ ಎಂದು ಬರೆದುಕೊಂಡಿದ್ದು, ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ. ಕಾಫಿ ಪ್ಲ್ಯಾಂಟರ್ ಯಶಸ್ ಪಾಟ್ಲಾ ಅವರನ್ನು ವಿವಾಹವಾಗಿರುವ ನಟಿ, ಕಳೆದ ಜನವರಿಯಲ್ಲಿ ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು. ಆ ಬಳಿಕ ಸಾಕಷ್ಟು ಸರಣಿ ಪ್ರಗ್ನೆನ್ಸಿ ಫೋಟೋಶೂಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದರು. ಮಗು ಹುಟ್ಟುವ ವಾರದ ಮುಂಚೆ ಕೂಡಾ ನಟಿ ಫೋಟೋಶೂಟ್ ಮಾಡಿಸಿದ್ದರು. ಇದೀಗ ಅದಿತಿ ಹಂಚಿಕೊಂಡಿರುವ ಸುದ್ದಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Related posts

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ: ಶಾರುಖ್ ಖಾನ್ ಪುತ್ರ ಆರ್ಯನ್ ಗೆ ತನಿಖೆ ಉರುಳು

‘ಪ್ರೇಮಲೋಕ 2’ ಶೂಟಿಂಗ್..! 1987ರಲ್ಲಿ ರಿಲೀಸ್ ಆಗಿದ್ದ ‘ಪ್ರೇಮಲೋಕ’ ದಲ್ಲಿ 11 ಹಾಡು ಇದರಲ್ಲಿ 25 ಹಾಡು..?

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ರಾಜ್ಯದಲ್ಲಿ ಸರ್ಕಾರಿ ರಜೆ ಕೊಡೊಲ್ಲ..! ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ