ಕ್ರೀಡೆ/ಸಿನಿಮಾಬೆಂಗಳೂರು

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಟ ಅಭಿಷೇಕ್ ಅಂಬರೀಶ್-ಅವಿವಾ ನಿಶ್ಚಿತಾರ್ಥ

ನ್ಯೂಸ್ ನಾಟೌಟ್: ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ಇಂದು ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. 

ನಟ ಅಭಿಷೇಕ್​ ಅಂಬರೀಷ್ ಅವರಿಗೆ ಮದುವೆಯಂತೆ ಎನ್ನುವ ಸುದ್ದಿ ಬಹಳ ದಿನಗಳ ಹಿಂದೆಯೇ ಸಾಮಾಜಿಕ ತಾಲಜಾಣದಲ್ಲಿ ವೈರಲ್ ಆಗಿತ್ತು. ಈ ಸುದ್ದಿಯನ್ನು ಅಭಿಷೇಕ್​ ಅವರು ತಳ್ಳಿಹಾಕಿದ್ದರು.ಸದ್ಯ ಮದುವೆ ಬಗ್ಗೆ ಯೋಚನೆ ಇಲ್ಲ ಎಂದಿದ್ದರು.ಆದರೆ ಮದುವೆ ವಿಚಾರವನ್ನು ಇತ್ತೀಚೆಗೆ ಅಂಬರೀಷ್​ ಕುಟುಂಬದ ಆಪ್ತ ಮೂಲಗಳು ಖಚಿತಪಡಿಸಿದ್ದವು.ಇದೀಗ ಅದು ಅಧಿಕೃತವಾಗಿದ್ದು, ಇಂದು (ಡಿ.11) ಅಭಿಷೇಕ್​ ಅಂಬರೀಷ್​ ತಮ್ಮ ಗೆಳತಿ ಹಾಗೂ ಮಾಡೆಲ್​ ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ 9.30ಕ್ಕೆ ಆರ್.ಟಿ ನಗರದ ಫೋರ್ ಸೀಸನ್ಸ್ ಹೋಟೆಲ್​ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಎರಡೂ ಕುಟುಂಬದ ಸಮ್ಮುಖದಲ್ಲಿ ನಡೆದಿದೆ. ಸಚಿವ ಅಶ್ವಥ್ ನಾರಾಯಣ್ ಸೇರಿದಂತೆ ನಿಶ್ಚಿತಾರ್ಥಕ್ಕೆ ಐಷಾರಾಮಿ ಕಾರುಗಳಲ್ಲಿ ಕುಟುಂಬಸ್ಥರು, ಸ್ನೇಹಿತರು ಮತ್ತು ಸಿನಿಮಾ- ರಾಜಕೀಯ ಗಣ್ಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು. ಟೈಟ್ ಸೆಕ್ಯೂರಿಟಿ ಇರುವ ಕಾರಣ ಯಾವುದೇ ವಿಡಿಯೋ ಅಥವಾ ಫೋಟೋ ರಿವೀಲ್ ಆಗಿಲ್ಲ.

ಅಭಿ ಕೈಹಿಡಿಯಲಿರುವ ಅವಿವಾ ಬಿದ್ದಪ್ಪ:

ಫ್ಯಾಷನ್​ ಲೋಕದ ಖ್ಯಾತ ಡಿಸೈನರ್ ಪ್ರಸಾದ್​ ಬಿದ್ದಪ್ಪ ಅವರ ಮಗಳು. ಅವಿವಾ ಮತ್ತು ಅಭಿ ನಾಲ್ಕು ವರ್ಷಗಳಿಂದ ಲವ್​ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಇಬ್ಬರು ಪ್ರೀತಿಗೆ ಎರಡೂ ಕುಟುಂಬದಲ್ಲಿ ಗ್ರೀನ್​ ಸಿಗ್ನಲ್​ ಸಿಕ್ಕ ಬಳಿಕ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಇಬ್ಬರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಎಲ್ಲವು ಅಂದು ಕೊಂಡಂತೆ ಆದರೆ ಜನವರಿ 2023ರ ಸಂಕ್ರಾಂತಿ ಹಬ್ಬದಂದು ಅದ್ಧೂರಿಯಾಗಿ ಮದುವೆ ನಡೆಯಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ನಿಶ್ಚಿತಾರ್ಥ ಆಗುವವರೆಗೂ ಹುಡುಗಿ ಯಾರು ಎಂಬುದು ಯಾರಿಗೂ ತಿಳಿಯದಂತೆ ರಹಸ್ಯ ಕಾಪಾಡುವ ಪ್ರಯತ್ನ ಮಾಡಿದ್ದರು ನಟ ಅಭಿ ಅವರು. ಆದರೆ, ಬಹಳ ಹಿಂದೆಯೇ ಅವಿವಾ ಬಿದ್ದಪ್ಪ ಹೆಸರು ಮಾಧ್ಯಮಗಳಲ್ಲಿ ಹರಿದಾಡಿತು. ಸದ್ಯ ಅಭಿಷೇಕ್​ ಕಾಳಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ.

Related posts

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಪ್ರಕರಣ: ಇಬ್ಬರು ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್​ಶೀಟ್ ಸಲ್ಲಿಕೆ

ಹಾಲು ತರಲು ಹೋದ ಮಹಿಳೆಯನ್ನು ಬಾಯಿ ಮುಚ್ಚಿ ಎಳೆದೊಯ್ಯಲು ಯತ್ನಿಸಿದ ವ್ಯಕ್ತಿ..! ಆತನನ್ನು ಬೆತ್ತಲೆಗೊಳಿಸಿ ಥಳಿಸಿದ ಯುವಕರು..!

ಒಂದೇ ಇನಿಂಗ್ಸ್‌ ನಲ್ಲಿ 10 ವಿಕೆಟ್: ಕುಂಬ್ಳೆ ಸಾಧನೆ ಸರಿಗಟ್ಟಿದ ಎಜಾಜ್ ಪಟೇಲ್