ಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ಮರಳು ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು, ಲಾರಿ ಬಿಟ್ಟು ಪರಾರಿಯಾದ ಚಾಲಕ, ಪೊಲೀಸರು ಹೇಳಿದ್ದೇನು..?

ನ್ಯೂಸ್ ನಾಟೌಟ್: ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸುಳ್ಯ ಪೊಲೀಸರು ಪರವಾನಗಿ ಇಲ್ಲದೆ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯೊಂದನ್ನು ಶನಿವಾರ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ.

ಸುಳ್ಯ ತಾಲೂಕಿನ ಕಸಬಾ ಗ್ರಾಮದ ಬಸ್ಮಡ್ಕ ಎಂಬಲ್ಲಿ ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಈರಯ್ಯ ದೊಂತೂರು ಮತ್ತು ಪೊಲೀಸ್ ಸಿಬ್ಬಂದಿ ರೌಂಡ್ಸ್ ನಲ್ಲಿದ್ದಾಗ ಅನುಮಾನಗೊಂಡು ಲಾರಿಯೊಂದನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಲಾರಿಯನ್ನು ನಿಲ್ಲಿಸಿದ ಚಾಲಕ ಪರಾರಿಯಾಗಿರುತ್ತಾನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಪೊಲೀಸರು ಲಾರಿಯನ್ನು ಪರಿಶೀಲಿಸಿದಾಗ ಯಾವುದೇ ಪರವಾನಿಗೆ ಪಡೆಯದೇ ಸರ್ಕಾರಿ ಸ್ವತ್ತಾದ ಮರಳನ್ನು ಕಳ್ಳತನದಿಂದ ಸಾಗಿಸುತ್ತಿರುವ ಹಿನ್ನೆಲೆಯಲ್ಲಿ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಲಾರಿ ಚಾಲಕ ಮತ್ತು ಮಾಲೀಕರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 21/2024 ಕಲಂ 379 ಐಪಿಸಿ ರಂತೆ ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

https://newsnotout.com/2024/02/lottery-abudabi/

Related posts

ಬಿಜೆಪಿ ಸೇರಿದರಾ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ? ಬಿಜೆಪಿ ಲೆಟರ್‌ಹೆಡ್‌ನಲ್ಲಿ ಬಯಲಾಯ್ತ ಕುಮಾರಸ್ವಾಮಿ ರಾಜಕೀಯ ನಡೆ?

ಕೊಲ್ಕತ್ತದಲ್ಲೂ ಏನಿದು ಕರಾವಳಿಯ ಕಾಂತಾರ ದುರ್ಗಾ ಪೂಜೆ? ತುಳುನಾಡ ಪಂಜುರ್ಲಿ ದೈವದ ಮೂರ್ತಿಗೆ ಪೂಜೆ!

ಮೊಬೈಲ್ ಗಾಗಿ 15 ರ ತಮ್ಮನನ್ನೇ ಸುತ್ತಿಗೆಯಿಂದ ಹೊಡೆದು ಕೊಂದ 18 ರ ಅಣ್ಣ..! ಮೊಬೈಲ್ ನಲ್ಲಿ ಅಂತದ್ದೇನಿತ್ತು..?