ಕರಾವಳಿ

ಸಂಪಾಜೆ:ಗ್ರಾಮ ಪಂಚಾಯತ್ ಗದ್ದುಗೆ ಗುದ್ದಾಟಲ್ಲಿ ಗೆದ್ದ ಸುಮತಿ ಶಕ್ತಿವೇಲು,ಎಸ್.ಕೆ.ಹನೀಫ್

ನ್ಯೂಸ್ ನಾಟೌಟ್ : ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಸಂಪಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಹಾಗೂ ಉಪಾಧ್ಯಕ್ಷರಾಗಿ ಎಸ್.ಕೆ.ಹನೀಫ್ ಅವರು ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಬೆಂಬಲಿತರಿಗೆ ಬಹುಮತ ಇರುವ ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಮತಿ ಶಕ್ತಿವೇಲು ಹಾಗೂ ವಿಮಲಾ ಪ್ರಸಾದ್ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಒಬ್ಬರಾದ ವಿಮಲ ಪ್ರಸಾದ್ ನಾಮಪತ್ರ ಹಿಂಪಡೆದಿದ್ದು ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವಿರೋಧವಾಗಿ ಆಯ್ಕೆಯಾಗಿದ್ದರು.ಇದೀಗ ಉಪಾಧ್ಯಕ್ಷರಾಗಿ ಎಸ್.ಕೆ.ಹನೀಫ್ ಅವರು ಆಯ್ಕೆಯಾದರು.

ಮುಂದಿನ ಎರಡೂವರೆ ವರ್ಷಗಳ ಕಾಲ ಎರಡನೇ ಅವಧಿಯ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಹಾಗೂ ಉಪಾಧ್ಯಕ್ಷರಾಗಿ ಎಸ್.ಕೆ.ಹನೀಫ್ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಕೆ.ಅಬೂಸಾಲಿ ಹಾಗೂ ಎಸ್.ಕೆ.ಹನೀಫ ಅವರು ನಾಮಪತ್ರ ಸಲ್ಲಿಸಿದ್ದರು.

ಒಟ್ಟಿನಲ್ಲಿ ಸಂಪಾಜೆ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷತೆ ಆಯ್ಕೆಭಾರಿ ಕುತೂಹಲ ಮೂಡಿಸುವಂತೆ ಮಾಡಿತ್ತು.ಇದೀಗ ಆ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಂತಾಗಿದೆ.

Related posts

ಗಾಂಧಿ ವಿಚಾರ ವೇದಿಕೆ ವತಿಯಿಂದ ಮಾಸದ ಸಂವಾದ

ಬಿಸಿಯೂಟದ ಅಕ್ಕಿಯಲ್ಲಿ ತೇಲಾಡುತ್ತಿರುವ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ, ಮಣಿಗಳಂತೆ ಕಾಣುವ ಈ ಅಕ್ಕಿಯ ಊಟ ತಿಂದರೆ ಮಕ್ಕಳ ಗತಿ ಏನು?

ಉಡುಪಿ:ದಟ್ಟ ಕಾಡಿನಲ್ಲಿ ಯುವಕ ನಾಪತ್ತೆಯಾಗಿ ಒಂದು ವಾರದ ಬಳಿಕ ಪತ್ತೆ ಪ್ರಕರಣ,ಗ್ರಾಮಸ್ಥರಿಂದ ಸಾಕುನಾಯಿ-ವಿವೇಕಾನಂದ ಇಬ್ಬರ ಮೆರವಣಿಗೆ,ಕುಟುಂಬಸ್ಥರಿಂದ ಸಿಹಿಯೂಟ