ಸಂಪಾಜೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ರಸ್ತೆಯ ಸೈಡ್‌ನಲ್ಲಿ ಅಳವಡಿಸಲಾದ ಕಲ್ಲಿಗೆ ಸ್ಕೂಟಿ ಗುದ್ದಿ ಅಪಘಾತ ಸಂಭವಿಸಿದೆ. ಕೊಡಗಿನ ಎರಡನೇ ಮೊಣ್ಣಂಗೇರಿಯ ಚಿಂತನ್ ಹಾಗೂ ರೋಷನ್ ದ್ವಿಚಕ್ರ ವಾಹನದಲ್ಲಿದ್ದವರು ಎಂದು ತಿಳಿದು ಬಂದಿದೆ. ರೋಷನ್ ಸೊಂಟಕ್ಕೆ ಗಂಭೀರ ಪೆಟ್ಟಾಗಿದ್ದು ಸದ್ಯ ಆತನನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಎದುರಿನಿಂದ ಹಠಾತ್ ಆಗಿ ಕಾರು ಬಂದಿದೆ. ಈ ವೇಳೆ ಕಾರನ್ನು ತಪ್ಪಿಸಲು ಹೋಗಿ ರಸ್ತೆಯಿಂದ ಸ್ಕೂಟಿಯನ್ನು ಕೆಳಕ್ಕಿಳಿಸಿದಾಗ ಕಲ್ಲಿಗೆ ಡಿಕ್ಕಿ ಹೊಡೆದು ಸ್ಕೂಟಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.