ಕರಾವಳಿ

ಸಂಪಾಜೆ ಹೊಳೆಯ ಹೂಳೆತ್ತುವ ಕೆಲಸಕ್ಕೆ ಕೆಲವರಿಂದ ಅಡ್ಡಿ! ಪಂಚಾಯತ್ ವಾಟ್ಸಾಪ್‌ ಗ್ರೂಪ್‌ನಲ್ಲೇ ಸ್ಫೋಟಿಸಿದ ಖ್ಯಾತ ಯಕ್ಷಗಾನ ಕಲಾವಿದರ ಅಸಮಾಧಾನ

ನ್ಯೂಸ್ ನಾಟೌಟ್ : ಕಳೆದ ವರ್ಷ ಪ್ರವಾಹದ ಸುಳಿಗೆ ಸಿಲುಕಿ ಲಕ್ಷಾಂತರ ರೂ.ನಷ್ಟಕ್ಕೆ ಸಾಕ್ಷಿಯಾಗಿದ್ದ ಸಂಪಾಜೆಯಲ್ಲಿ ಇದೀಗ ಹಿಟಾಚಿ, ಜೆಸಿಬಿ ಮೂಲಕ ಹೂಳೆತ್ತುವ ಕಾರ್ಯ ಭರದಿಂದ ಸಾಗುತ್ತಿದೆ. ಮತ್ತೊಂದು ಕಡೆ ಕೆಲವರು ಹೂಳೆತ್ತುವ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆಂದು ಖ್ಯಾತ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆಯವರು ಆರೋಪಿಸಿದ್ದಾರೆ. ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.

ಪರಂಬೋಕು ಜಾಗದಲ್ಲಿ ಕೆಲವರು ಕೃಷಿ ಮಾಡಿಕೊಂಡಿದ್ದಾರೆ. ಪಯಸ್ವಿನಿ ಹೊಳೆಯನ್ನು ಆಕ್ರಮಿಸಿಕೊಂಡಿದ್ದಾರೆ. ಹೂಳೆತ್ತುವ ಸಮಯದಲ್ಲಿ ಅದು ನಮ್ಮ ಜಾಗ ಆ ಕಡೆಯಿಂದ ಮಣ್ಣು ತೆಗೆಯಬಾರದು ಎಂದು ತಡೆಯೊಡ್ಡುತ್ತಿದ್ದಾರೆ. ಹರಿಯುವ ನದಿ ಸರಕಾರಕ್ಕೆ ಸೇರಿದ್ದು, ಅದಕ್ಕೆ ಬೇಲಿ ಹಾಕಲು ಯಾರಿಗೂ ಅವಕಾಶ ನೀಡಬಾರದು. ಸಂಬಂಧಪಟ್ಟ ಅಧಿಕಾರಿಗಳು ಗಮನಕೊಡಬೇಕೆಂದು ಜಯಾನಂದ ಸಂಪಾಜೆಯವರು ಆಗ್ರಹಿಸಿದ್ದಾರೆ.

ಪಂಚಾಯತ್ ಗ್ರೂಪ್‌ನಲ್ಲಿ ಜಯಾನಂದ ಸಂಪಾಜೆಯವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಹೀಗೆ, “ಪ್ರಾಕೃತಿಕ ವಿಕೋಪವನ್ನು , ಪ್ರವಾಹ ಭೀತಿಯನ್ನು ತಡೆಯಲು ಆಗುತ್ತಿರುವ ಕಾಮಗಾರಿ ನೋಡಿದಾಗ ಮನಸ್ಸಿಗೆ ನೆಮ್ಮದಿ. ಆದರೆ ಹೊಳೆಯಲ್ಲಿ ಹೂಳು ತುಂಬಿ ಉಳಿಯಬಿದ್ದು ಈಗ ಅದಕ್ಕೆ ಬೇಲಿ ಹಾಕಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪರಂಬೋಕು ಜಾಗ ತನ್ನದೇ ಎಂದು ಕೆಲವರು ವಾದಿಸುತ್ತಿದ್ದಾರೆ. ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಂತವರನ್ನು ನೋಡಿದಾಗ ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ. ಕಳೆದ ವರ್ಷ ಪ್ರವಾಹದಿಂದ ಮನೆ, ಅಂಗಡಿ, ಕೃಷಿಗೆ ಆದ ನಷ್ಟ ಏನು ಅನ್ನುವುದು ಎಲ್ಲರಿಗೂ ತಿಳಿದಿದೆ. ಸ್ವಾರ್ಥ ತುಂಬಿದ ಜನರಿಗೆ ಯಾವಾಗ ಅರ್ಥ ಆಗುವುದೋ ದೇವರೇ ಬಲ್ಲ’ ಎಂದು ತಮ್ಮ ನೋವನ್ನು ಹೊರ ಹಾಕಿದ್ದಾರೆ.

Related posts

ಮಡಿಕೇರಿ: ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ, ಓರ್ವ ಆರೋಪಿ ಬಂಧನ

ಮಂಗಳೂರು ಭೀಕರ ವಿಮಾನ ದುರಂತಕ್ಕೆ ಇಂದಿಗೆ(ಮೇ.22)14 ವರ್ಷ..! ಶ್ರದ್ಧಾಂಜಲಿ ಕಾರ್ಯಕ್ರಮ

“ನಮ್ಮ ಪರ ನಿಂತ ಆ ಎರಡು ಶಕ್ತಿಗಳನ್ನು ಧರ್ಮಸ್ಥಳದ ಮಂಜುನಾಥನೇ ಕಾಪಾಡ್ತಾನೆ” ಧರ್ಮಸಂರಕ್ಷಣಾ ಯಾತ್ರೆ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಹೇಳಿಕೆ