ಕೊಡಗು

ಕೊಡಗು ಸಂಪಾಜೆ: ನಿವೃತ್ತ ಪೊಲೀಸ್ ಅಧಿಕಾರಿ ನಿಧನ

ನ್ಯೂಸ್ ನಾಟೌಟ್ : ಕೊಡಗು ಸಂಪಾಜೆಯ ನಿವೃತ್ತ ಪೊಲೀಸ್ ಅಧಿಕಾರಿ ಎಸ್‌ .ಕೆ. ಕುಟ್ಟಿ ಮೂಲ್ಯ ಅವರು ನಿಧನರಾಗಿದ್ದಾರೆ. ಅವರಿಗೆ ೭೨ ವರ್ಷವಾಗಿತ್ತು.

ಕಳೆದ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಸಂಪಾಜೆ, ವಿರಾಜಪೇಟೆ, ಮಡಿಕೇರಿಯಲ್ಲಿ ಸಬ್ ಇನ್ಸ್‌ ಪೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದರು. ಎಸ್ ಐ ಹುದ್ದೆಗೆ ಏರುವುದಕ್ಕೂ ಮೊದಲು ಅವರು ಗೃಹ ಮತ್ತು ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅವರು ಸಂಪಾಜೆಯಲ್ಲಿಯೇ ಪುರ್ಣಗೊಳಿಸಿದ್ದರು ಎಂದು ಸ್ನೇಹಿತ ಮೂಲಗಳು ತಿಳಿಸಿವೆ.

Related posts

ಮಡಿಕೇರಿ: ಹೊಟೇಲ್ ನಲ್ಲಿ ಗಾಂಜಾ ಮಾರಾಟ,ಇಬ್ಬರು ಪೊಲೀಸ್ ವಶಕ್ಕೆ

ಕೊಡಗು: ಪ್ರಗತಿಪರ ಕೃಷಿಕನಿಂದ ವಿಶೇಷ ಸಾಧನೆ, ಆದಿ ಕರಿಮೆಣಸು ತಳಿಯ ಸಂರಕ್ಷಣೆ ಮಾಡುತ್ತಿರುವ ರೈತನಿಗೆ ಪ್ರಶಸ್ತಿ ಗರಿ

ಮಡಿಕೇರಿ: ಮಗನನ್ನು ಮೈಸೂರು ಕಾಲೇಜಿಗೆ ಸೇರಿಸಿ ಬರುತ್ತಿದ್ದ ವೇಳೆ ರಸ್ತೆ ಅಪಘಾತ..! ಚಿಕಿತ್ಸೆ ಫಲಿಸದೆ ಶಿಕ್ಷಕಿ ಸಾವು..!