ಸುಳ್ಯ

ಸಂಪಾಜೆ ಮನೆ ದರೋಡೆ ಪ್ರಕರಣ:ಪ್ರಮುಖ ಆರೋಪಿಗೆ ಜಾಮೀನು ಮಂಜೂರು

ನ್ಯೂಸ್ ನಾಟೌಟ್: ಕಳೆದ ಒಂದು ವರ್ಷದ ಹಿಂದೆ ಸಂಪಾಜೆ ಚಟ್ಟೆಕಲ್ಲು ನಿವಾಸಿ ಜ್ಯೋತಿಷಿ ಹಾಗೂ ಅರ್ಚಕ ಅಂಬರೀಶ್‌ ಭಟ್‌ ರ ಮನೆ ಅಂಬಾಶ್ರಮಕ್ಕೆ ನುಗ್ಗಿ ಮನೆ ದರೋಡೆ ಪ್ರಕರಣದ ಆರೋಪದಡಿಯಲ್ಲಿ ಬಂಧಿತ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದುಬಂದಿದೆ.

2022ರ ಮಾ.20 ರಂದು ಈ ಘಟನೆ ಸಂಭವಿಸಿತ್ತು. ಅಂಬರೀಶ್‌ ಭಟ್‌ ರವರು ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ಅವರ ಪತ್ನಿ ಹಾಗೂ ಸೊಸೆಗೆ ಮಚ್ಚು ತೋರಿಸಿ ಮನೆಯಲ್ಲಿದ್ದ 100 ಗ್ರಾಂ ಚಿನ್ನಾಭರಣ ಹಾಗೂ ರೂ 5.5 ಲಕ್ಷ ನಗದು ದೋಚಿ ಪರಾರಿಯಾಗಿದ್ದರು.

ಈ ಪ್ರಕರಣದ ಆರೋಪಿಗಳ ಪೈಕಿ ಮುಖ್ಯ ಆರೋಪಿ ಸ್ಯಾಮ್‌ ಸನ್‌ ಪೋಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದು, ವರ್ಷದ ಬಳಿಕ ಸೆರೆಯಾಗಿದ್ದ. 2023 ರ ಫೆ.23 ರಂದು ಹಾಸನದಲ್ಲಿ ಬಂಧಿಸಲಾಗಿತ್ತು. ಆರೋಪಿಯನ್ನು ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

Related posts

ಉಪ್ಪಿನಂಗಡಿ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ,ಎರಡು ದೋಣಿ ಹಾಗೂ ಒಂದು ಹಿಟಾಚಿ ವಶಪಡೆದ ಅಧಿಕಾರಿಗಳು

ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೆಯ ಪ್ರಯುಕ್ತ AOLE ಸಂಸ್ಥೆಗಳ ವತಿಯಿಂದ ಹಸಿರು ಕಾಣಿಕೆ ಸಮರ್ಪಣೆ, ರಥೋತ್ಸವ ಕ್ಕೆ ಕ್ಷಣಗಣನೆ

ನಾಳೆ (ಜೂ.27) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ, ಜಿಲ್ಲಾಧಿಕಾರಿ ಆದೇಶ