ಕರಾವಳಿಕ್ರೈಂ

ಸಂಪಾಜೆಯಲ್ಲಿ ಒಂದೇ ದಿನ ಹೃದಯಾಘಾತಕ್ಕೆ 2ನೇ ಬಲಿ, ದೀಪಾವಳಿ ಸಂಭ್ರಮದಲ್ಲಿರುವಾಗಲೇ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕುಸಿದು ಬಿದ್ದು ಸಾವು

ನ್ಯೂಸ್ ನಾಟೌಟ್:  ಸಂಪಾಜೆಯಲ್ಲಿ ಒಂದೇ ದಿನ ಹೃದಯಾಘಾತಕ್ಕೆ 2ನೇ ಬಲಿಯಾಗಿದೆ. ದೀಪಾವಳಿ ಸಂಭ್ರಮದಲ್ಲಿರುವಾಗಲೇ ಮಾಜಿ ಗ್ರಾಮ ಪಂಚಾಯತ್ ಸದಸ್ಯ ತಲವರ್ ಷಣ್ಮುಗಂ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅವರು ಸಂಪಾಜೆ ಗ್ರಾಮ ಪಂಚಾಯತ್ 1ನೇ ವಾರ್ಡ್ ನಲ್ಲಿ ಬಿಜೆಪಿ  ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಕುಟುಂಬದೊಂದಿಗೆ ದೀಪಾವಳಿ  ಸಂಭ್ರಮದಲ್ಲಿರುವಾಗಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆ ಸೇರಿಸುವ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆಂದು ತಿಳಿದು ಬಂದಿದೆ. ಮೃತರಿಗೆ 62 ವರ್ಷ ಆಗಿತ್ತು. ಪತ್ನಿ, ಮೂವರು ಹೆಣ್ಣು ಮಕ್ಕಳು, ಓರ್ವ ಗಂಡು ಮಗನನ್ನು ಅಗಲಿದ್ದಾರೆಂದು ತಿಳಿದು ಬಂದಿದೆ. ಶನಿವಾರ ಸಂಜೆ ಸಂಪಾಜೆಯ ಕಲ್ಲುಗುಂಡಿಯಲ್ಲಿ ಟೈಲರ್ ಆಗಿದ್ದಅಬಿರ ನಾಗೇಶ್ಅನ್ನುವ ವ್ಯಕ್ತಿಯೊಬ್ಬರು ಕೂಡ ದಿಢೀರ್ ಹೃದಯಾಘಾತದಿಂದ ಸಾವಿಗೀಡಾಗಿದ್ದರು.

Related posts

ಗೋದಾಮಿನಲ್ಲಿ 10,000ಕ್ಕೂ ಹೆಚ್ಚು ಸೀರೆ ಪತ್ತೆ..! ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮತ್ತೇನೇನು ಸಿಕ್ಕಿದೆ ಗೊತ್ತಾ..?

ಸೆಂಟ್ರಲ್ ಜೈಲಿನ ಅಧೀಕ್ಷಕಿಯ ಕಾರು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ..! ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದಕ್ಕೆ ಅನಿತಾ ವಿರುದ್ಧ ಸಿಡಿದೆದ್ದ ಕೈದಿಗಳು..!

ಡ್ರೈವಿಂಗ್ ಕಲಿಯುವಾಕೆಯ ಅವಾಂತರ! ಪಾರ್ಕ್‌ ಮಾಡಿದ್ದ ಬೈಕ್‌ಗಳ ಮೇಲೆ ಕಾರು..! ವಿಡಿಯೋ ವೈರಲ್