ಕರಾವಳಿಕ್ರೈಂ

ಸಂಪಾಜೆ: ನಿಯಂತ್ರಣ ತಪ್ಪಿ ಲಾರಿಗೆ ಅಪ್ಪಳಿಸಿದ ಕಾರು, ಭಾರಿ ಶಬ್ಧದೊಂದಿಗೆ ಕಲ್ಲಿಗೆ ಡಿಕ್ಕಿಯಾದರೂ ಪ್ರಯಾಣಿಕರು ಪಾರು

ನ್ಯೂಸ್ ನಾಟೌಟ್: ಕಲ್ಲುಗುಂಡಿಯ ಸಂಪಾಜೆಯ ಕೈಪಡ್ಕ ರಸ್ತೆ ತಿರುಗುವಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಲಾರಿಗೆ ಗುದ್ದಿ ಬಳಿಕ ರಸ್ತೆಯ ಬದಿಯಲ್ಲಿ ಅಳವಡಿಸಿರುವ ಕಲ್ಲೊಂದಕ್ಕೆ ಡಿಕ್ಕಿಯಾಗಿರುವ ಘಟನೆ ಇದೀಗ ನಡೆದಿದೆ. ಘಟನೆಯಲ್ಲಿ ನಾಲ್ವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲಎಂದು ತಿಳಿದು ಬಂದಿದೆ.

ಲಾರಿಯೊಂದು ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿತ್ತು. ಕಾರೊಂದು ಮಡಿಕೇರಿಯಿಂದ ಸುಳ್ಯದತ್ತ ತೆರಳುತ್ತಿತ್ತು. ಈ ವೇಳೆ ಕಾರು ಚಾಲಕ ನಿಯಂತ್ರಣ ತಪ್ಪಿ ಲಾರಿಯ ಟೈರ್ ಗೆ ಗುದ್ದಿದ್ದಾನೆ. ಸಂಪೂರ್ಣ ರಾಂಗ್ ಸೈಡ್ ನಲ್ಲಿ ಬಂದ ಕಾರನ್ನು ಗಮನಿಸಿದ ಲಾರಿ ಚಾಲಕನ ಸಮಯ  ಪ್ರಜ್ಞೆಯಿಂದ ಸಂಭವನೀಯ ಭಾರಿ ದುರಂತ ತಪ್ಪಿದೆ. ಲಾರಿ ಗುದ್ದಿದ ಬಳಿಕ ರಸ್ತೆಯ ಬದಿಯಲ್ಲಿ ಅಳವಡಿಸಿರುವ ಕಲ್ಲೊಂದಕ್ಕೆ ಡಿಕ್ಕಿಯಾದ ಕಾರಿನ ಏರ್ ಬ್ಯಾಗ್ ಓಪನ್ ಆಗಿದೆ. ಕಾರು ಜಖಂಗೊಂಡಿದೆ. ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ ಎನ್ನಲಾಗಿದೆ.

Related posts

ಶ್ರೀರಾಮಸೇನೆ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡಿದ್ದಕ್ಕಾಗಿ 27 ಮಂದಿ ವಿರುದ್ಧ ಪ್ರಕರಣ ದಾಖಲು..! ತರಬೇತಿ ನಡೆದಿದ್ದ ಜಾಗದ ಖಾಸಗಿ ಭೂ ಮಾಲಿಕನಿಂದ ದೂರು ದಾಖಲು..!

ಮಂಗಳೂರು: ಏರ್ ಇಂಡಿಯಾ(Air India) ವಿಮಾನ ತಡವಾಗಿದ್ದಕ್ಕೆ ರೊಚ್ಚಿಗೆದ್ದ ಪ್ರಯಾಣಿಕರಿಂದ ವಿಮಾನ ನಿಲ್ದಾಣ(Airport)ದಲ್ಲೇ ಗಲಾಟೆ, EXCLUSIVE ವಿಡಿಯೋ(Video) ಇಲ್ಲಿದೆ ವೀಕ್ಷಿಸಿ

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಹಾವು, ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಕಂದಮ್ಮ ಮೃತ್ಯು