ಕರಾವಳಿಸುಳ್ಯ

ಸಂಪಾಜೆ: ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಗೇಟಿಗೆ ಗುದ್ದಿದ ಲಾರಿ ಜಖಂ..!ಏನಿದು ಘಟನೆ?

243

ನ್ಯೂಸ್ ನಾಟೌಟ್ : ಸಂಪಾಜೆ ಭಾಗದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ.ಅದರಲ್ಲೂ ಚಾಲಕನ ನಿಯಂತ್ರಣ ತಪ್ಪಿ ಅಥವಾ ಬ್ರೇಕ್ ವೈಫಲ್ಯಗಳಿಂದಾಗಿ ಹಲವಾರು ದುರ್ಘಟನೆಗಳು ನಡೆದಿರೋದನ್ನು ನಾವು ವರದಿಗಳ ಮೂಲಕ ತಿಳಿದು ಕೊಂಡಿದ್ದೇವೆ.ಇದೀಗ ಬ್ರೇಕ್ ವೈಫಲ್ಯದಿಂದಾಗಿ ಮತ್ತೊಂದು ದುರಂತ ಸಂಭವಿಸಿರುವ ಘಟನೆ ವರದಿಯಾಗಿದೆ.

ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ತಮಿಳುನಾಡು ಮೂಲದ ಲಾರಿಯೊಂದು ಸಂಪಾಜೆ ಬಳಿ ಬರುತ್ತಿದ್ದಂತೆ ಅಲ್ಲಿನ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಗೇಟಿಗೆ ಢಿಕ್ಕಿ ಹೊಡೆದಿದೆ.ಈ ವೇಳೆ ಗೇಟ್ ಜಖಂಗೊಂಡಿದ್ದು,ಲಾರಿಗೂ ಹಾನಿಯಾಗಿರುವ ಘಟನೆ ಸಂಭವಿಸಿದೆ.

ಇಂದು ಮುಂಜಾನೆ ವೇಳೆಗೆ ಈ ಅವಘಡ ಸಂಭವಿಸಿದ್ದು, ಲಾರಿಯ ಬ್ರೇಕ್ ವೈಫಲ್ಯಗೊಂಡು ಚಾಲಕನ ನಿಯಂತ್ರಣ ತಪ್ಪಿದೆ.ಬಳಿಕ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಗೇಟಿಗೆ ಢಿಕ್ಕಿಯಾಗಿದೆ ಎನ್ನಲಾಗಿದೆ.ಫೋಟೋದಲ್ಲಿ ನೀವು ಗೇಟು ಹಾಗೂ ಲಾರಿಯ ಮುಂಭಾಗ ಜಖಂಗೊಂಡಿರುವುದನ್ನು ಕಾಣಬಹುದಾಗಿದೆ.

See also  ಬೆಳ್ತಂಗಡಿ: ಗಡಾಯಿಕಲ್ಲು ಸೇರಿದಂತೆ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ, ವನ್ಯಜೀವಿ ವಿಭಾಗದಿಂದ ಆದೇಶ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget