ಯಕ್ಷಯಾನ

ಯಕ್ಷಗಾನ ಅರ್ಥದಾರಿ ಜಬ್ಬಾರ್‌ ಸಮೊಗೆ ವನಜ ರಂಗಮನೆ ಪ್ರಶಸ್ತಿ

276
Spread the love

ಸುಳ್ಯ: ಇಲ್ಲಿನ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ ನೀಡುವ ವನಜ ರಂಗಮನೆ ಪ್ರಶಸ್ತಿಗೆ ಈ ವರ್ಷ ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬರ್ ಸಮೊ ಆಯ್ಕೆಯಾಗಿದ್ದಾರೆ.

ರಂಗನಿರ್ದೇಶಕ ಜೀವನ್‌ ರಾಂ ಸುಳ್ಯ ಇವರ ತಾಯಿ ವನಜಾಕ್ಷಿ ಜಯರಾಮ್‌ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುತ್ತದೆ. ಜಬ್ಬಾರ್ ಸಮೊ ಅವರು ಕಳೆದ 35 ವರ್ಷಗಳಿಂದಯಕ್ಷಗಾನ ಅರ್ಥದಾರಿಯಾಗಿ ಜನಮನದಲ್ಲಿ ಗುರುತಿಸಿಕೊಂಡಿದ್ದಾರೆ. ಮೂಲತಃ ಸುಳ್ಯ ತಾಲೂಕಿನ ಸಂಪಾಜೆಯವರಾಗಿರುವ ಜಬ್ಬಾರ್ ಸಮೊ ಸದ್ಯ ಪುತ್ತೂರಿನಲ್ಲಿ ನೆಲೆಸಿದ್ದಾರೆ. ಇಪ್ಪತ್ತೆಂಟು ವರ್ಷ ರೇಷ್ಮೆ ಇಲಾಖೆಯಲ್ಲಿಕೆಲಸ ಮಾಡಿರುವ ಅವರು ಈಗ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ.

See also  ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಸೇರಿ 58 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  Ad Widget   Ad Widget   Ad Widget