ಕರಾವಳಿಸುಳ್ಯ

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ‘ಸಂಭ್ರಮ’, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ನಡೆದ ಕಾರ್ಯಕ್ರಮ

ನ್ಯೂಸ್ ನಾಟೌಟ್: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ವಾಣಿಜ್ಯ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಸಂಭ್ರಮ 2023 ಕಾರ್ಯಕ್ರಮ  ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಥಮ ಹಾಗೂ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸ್ಪರ್ಧೆಯನ್ನು ಫೈನಲ್ ಇಯರ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದರು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಪ್ರೊ. ರುದ್ರಕುಮಾರ್ ಯಂ. ಮಾತನಾಡಿ ಸಂಭ್ರಮ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸಂಭ್ರಮಿಸಿದ್ದೀರಿ, ಹಣಕಾಸು ವ್ಯವಹಾರ ಉದ್ಯಮದಲ್ಲಿ ಬದುಕುವ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ನಡೆದ ಎಲ್ಲ ಸ್ಪರ್ಧೆಗಳು ಬಹಳಷ್ಟು ಉಪಯೋಗವಾಗಲಿದೆ.ವ್ಯವಹಾರ ಉದ್ಯಮದಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು  ಜೀವನಕ್ಕೆ ಬೇಕಾಗಿರುವ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

 ಗೌರವ ಅತಿಥಿಯಾಗಿ ಭಾಗವಹಿಸಿದ ಸುಳ್ಯ ತಾಲೂಕಿನ ಬ್ಯಾಂಕ್ ಆಫ್ ಬರೋಡ ಇದರ ವ್ಯವಸ್ಥಾಪಕ ಅಶೋಕ್ ವಿಮನ್ ಅವರು  ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಸಕಾರಾತ್ಮಕ ಸ್ಪರ್ಧೆಗಳು ನಿಮ್ಮನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಈ ಸ್ಪರ್ಧಾತ್ಮಕ ಮನೋಭಾವ ನಿಮ್ಮಲ್ಲಿ ಸದಾ ಇರಬೇಕು ಹಾಗೂ ನಿಮ್ಮ ವಿಧ್ಯಾಭ್ಯಾಸ ಒಳ್ಳೆಯ ಉದ್ಯೋಗ ಅವಕಾಶಗಳು ಸಿಗುವ ತನಕ ಮುಂದುವರಿಯಲಿ ಎಂದು ಹಿತವಚನ ನೀಡಿದರು.

 ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ರತ್ನಾವತಿ .ಡಿ, ವಾಣಿಜ್ಯ ಸಂಘದ ಸಂಚಾಲಕಿ ಶ್ರೀಮತಿ ದಿವ್ಯ ಟಿ. ಎಸ್, ಶ್ರೀಮತಿ ಗೀತಾ ಶೆಣೈ, ಶ್ರೀ ಶ್ರೀಧರ್ ವಿ. ಹಾಗೂ ವಿಧ್ಯಾರ್ಥಿ ಪ್ರತಿನಿಧಿಗಳಾಗಿ ರಜತ್ ಕುಮಾರ್, ಶ್ರೀವತ್ಸ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಮಾನವೀಯ ನೆಲೆಯಲ್ಲಿ ಪ್ರವೀಣ್‌ ನೆಟ್ಟಾರು ಪತ್ನಿ ನೌಕರಿಗೆ ಮರು ನೇಮಕ: ಸಿಎಂ ಸಿದ್ದರಾಮಯ್ಯ

ಮಲೆಯಾಳಂ ಸಿನಿಮಾದತ್ತ ವಾಲಿದರೆ ರಾಜ್‌ ಬಿ. ಶೆಟ್ಟಿ ?

ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಾಂಕ ಘೋಷಣೆ, ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ