ಕ್ರೀಡೆ/ಸಿನಿಮಾವೈರಲ್ ನ್ಯೂಸ್ಸಿನಿಮಾ

ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ನಟಿ ಸಮಂತಾ..? ಏನಿದು ವಿವಾದ..?

228

ನ್ಯೂಸ್ ನಾಟೌಟ್: ಬಹುಭಾಷಾ ನಟಿ ಸಮಂತಾ ಕಳೆದ ಕೆಲ ಸಮಯದಿಂದ ಅನಾರೋಗ್ಯ ಕಾರಣದಿಂದ ಚಿತ್ರರಂಗದಿಂದ ದೂರವಾಗಿದ್ದರು. ಇತ್ತೀಚೆಗೆ ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾದಲ್ಲಿ ನಟಿಸುವ ಬಗ್ಗೆ ಅನೌನ್ಸ್‌ ಮಾಡಿದ್ದರು. ಮಯೋಸೈಟಿಸ್ ಎನ್ನುವ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸಿನಿಮಾದಲ್ಲಿ ನಟಿಸುವುದು ಕಡಿಮೆ ಆಗಿದೆ ವಿನಃ ಸಂಪೂರ್ಣವಾಗಿ ಅವರು ಸಿನಿಮಾರಂಗದಿಂದ ದೂರವಾಗಿಲ್ಲ. ಪ್ರವಾಸ – ಪಯಣ ಹೀಗೆ ನಾನಾ ಹವ್ಯಾಸಗಳೊಂದಿಗೆ ಅವರು ದಿನ ಕಳೆಯುತ್ತಿದ್ದಾರೆ.

ಇತ್ತೀಚೆಗಷ್ಟೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ‘ಫಾರ್ ಇನ್‌ಫ್ರಾರೆಡ್ ಸೌನಾ’ ವಿಧಾನದ ಉಪಯೋಗದ ಕುರಿತು ಫೋಟೋವನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಫಾರ್ ಇನ್‌ಫ್ರಾರೆಡ್ ಸೌನಾ’ ಎಂದರೆ ದೀರ್ಘಕಾಲದ ಕಾಯಿಲೆಗಳು, ಚರ್ಮದ ಸೌಂದರ್ಯ, ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯವಾಗುವ ವಿಧಾನ. ಈ ವಿಧಾನದಲ್ಲಿ ಅನುಸರಿಸುವವರು ಸ್ವಲ್ಪ ಸಮಯ ಬಾತ್‌ ಟಬ್‌ ನಲ್ಲಿರಬೇಕಾಗುತ್ತದೆ. ಸಮಂತಾ ಟವೆಲ್‌ ವೊಂದನ್ನು ಸುತ್ತಿಕೊಂಡು ಬಾತ್‌ ಟಬ್‌ ನಲ್ಲಿ ಕೂತು ಈ ವಿಧಾನವನ್ನು ಅನುಸರಿಸಿದ್ದರು. ಇದರ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಸಮಂತಾ ಟವೆಲ್‌ ಹಾಕಿ ಕೂತಿರುವ ಫೋಟೋ ಪೋಸ್ಟ್‌ ಮಾಡುವ ಮುನ್ನ, ಬೆತ್ತಲಾಗಿರುವ ದೇಹದ ಫೋಟೋವನ್ನು ಹಂಚಿಕೊಂಡಿದ್ದರು. ಕೂಡಲೇ ಅದನ್ನು ಅವರು ಡಿಲೀಟ್‌ ಮಾಡಿದ್ದಾರೆ ಎನ್ನುವ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಸಮಂತಾ ಅವರು ಇದನ್ನು ಪೋಸ್ಟ್ ಮಾಡಿದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಟ್ರೆಂಡ್ ಆಗಿದ್ದಾರೆ. ಸಮಂತಾ ಅವರೇ ತಮ್ಮ ಬೆತ್ತಲೆ ಫೋಟೋವನ್ನು ಶೇರ್ ಮಾಡಿ ಡಿಲೀಟ್ ಮಾಡಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಹಾಗೂ ನೆಟ್ಟಿಗರಲ್ಲಿ ಈ ವಿಚಾರ ಜಟಾಪಟಿಗೆ ಕಾರಣವಾಗಿದೆ. ಇಲ್ಲ ಸ್ಯಾಮ್ ಹೀಗೆ ಮಾಡಿಲ್ಲ ಇದನ್ನು ಮಾರ್ಫ್ ಮಾಡಿದ್ದಾರೆ. ಇದೊಂದು ಫೇಕ್ ಫೋಟೋವೆಂದು ಅಭಿಮಾನಿಗಳು ವಾದಿಸಿದ್ದಾರೆ. ಇನ್ನೊಂದೆಡೆ ಫೇಕ್ ಆದರೆ ಸಮಂತಾ ಕತ್ತಿನಲ್ಲಿರುವ ಸರ ಒಂದೇ ರೀತಿ ಯಾಕಿದೆ ಎಂದು ಕೆಲವರು ಮರು ಪ್ರಶ್ನೆಯನ್ನು ಹಾಕಿದ್ದಾರೆ.

See also  ದರ್ಶನ್‌ ಫಾರ್ಮ್ ಹೌಸ್‌ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್‌ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೆ ಜೀವ..! ಫಾರ್ಮ್ ಹೌಸ್ ಪಕ್ಕದಲ್ಲೇ ರಕ್ತಕಾರಿ ಸತ್ತಿದ್ದ ಶ್ರೀಧರ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget