Uncategorized

ನಟ ನಾಗ ಚೈತನ್ಯ ಶೋಭಿತಾ ಜೊತೆ ನಿಶ್ಚಿತಾರ್ಥ..! ಕುತೂಹಲ ಮೂಡಿಸಿದ ಮಾಜಿ ಪತ್ನಿ ನಟಿ ಸಮಂತಾ ಪ್ರತಿಕ್ರಿಯೆ..!

ನ್ಯೂಸ್ ನಾಟೌಟ್: ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಪ್ರೀತಿಯಲ್ಲಿ ಇರೋ ವಿಚಾರ ಈಗ ಅಧಿಕೃತವಾಗಿದ್ದು, ಇಬ್ಬರೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಾಗ ಚೈತನ್ಯ ಅವರ ನಿವಾಸದಲ್ಲೇ ನಿಶ್ಚಿತಾರ್ಥ ನಡೆದಿದೆ. ಸಮಂತಾ ಪ್ರತಿಕ್ರಿಯೆ ಹೇಗೆ ಇರುತ್ತದೆ ಎನ್ನುವ ಕುತೂಹಲ ಮೂಡಿದೆ.
ಸಮಂತಾ ಹಾಗೂ ನಾಗ ಚೈತನ್ಯ ಅವರು ಹಲವು ವರ್ಷಗಳ ಕಾಲ ಪ್ರೀತಿಸಿ ಆ ಬಳಿಕ ಮದುವೆ ಆದರು. 2017ರಲ್ಲಿ ಅದ್ದೂರಿಯಾಗಿ ಇವರ ವಿವಾಹ ನೆರವೇರಿತು. ನಾಲ್ಕೇ ವರ್ಷಕ್ಕೆ ಇವರ ಸಂಬಂಧ ಕೊನೆ ಆಯಿತು. 2021ರ ಅಕ್ಟೋಬರ್​ನಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ದೂರ ಆದರು. ಈಗ ನಾಗ ಚೈತನ್ಯ ಬೇರೆ ನಟಿಯ ಜೊತೆ ಹೊಸ ಬಾಳು ಆರಂಭಿಸುತ್ತಿದ್ದಾರೆ.

ನಾಗ ಚೈತನ್ಯ ಮನೆಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಿದೆ. ನಾಗ ಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ ಈ ನಿಶ್ಚಿತಾರ್ಥ ನೆರವೇರಿಸಿದ್ದಾರೆ. ಕೇವಲ ಆಪ್ತರು ಹಾಗೂ ಕುಟುಂಬದವರು ಮಾತ್ರ ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿರೋ ಶೋಭಿತಾ ಅವರು ಈವರೆಗೆ ನಾಗ ಚೈತನ್ಯ ಜೊತೆ ತೆರೆ ಹಂಚಿಕೊಂಡಿಲ್ಲ. ಈ ಬಗ್ಗೆ ಸಮಂತಾ ಪ್ರತಿಕ್ರಿಯೆ ನೀಡುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Click

https://newsnotout.com/2024/08/dog-droped-down-from-5-flood-baby-nomore-kannada-news/
https://newsnotout.com/2024/08/money-transfer-limit-increased-in-upi-kannada-news-riserve-bank/
https://newsnotout.com/2024/08/pm-modi-wayanad-entry-on-saturday-kannda-news-viral-news/
https://newsnotout.com/2024/08/final-vinesh-pogat-kannada-news-silver-state-govt-gave-4-crore-rupees/

Related posts

ಭಗವನ್ನಾಮ ಸ್ಮರಣೆಯಿಂದ ಜೀವನ ಸಾರ್ಥಕ: ಮಾಣಿಲ ಶ್ರೀ

ಒಂದೇ ಹುಡುಗನ ಮದುವೆಯಾದ ಅವಳಿ ಸಹೋದರಿಯರು..!

ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಬೂಟಿನಿಂದ ಹೊಡೆದ ಪ್ರಾಂಶುಪಾಲ