ಬೆಂಗಳೂರು: ಕರ್ನಾಟಕ ಮೂಲದ ಹಿರಿಯ ಗಾಂಧಿವಾದಿ ವೈದ್ಯ ಡಾ,ಎಸ್.ಎನ್.ಸುಬ್ಬರಾವ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ರಾಜಸ್ಥಾನದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಂಬಲ್ ಕಣಿವೆ ಡಕಾಯಿತರ ಶರಣಾಗತಿಯಲ್ಲಿ ವಿನೋಬಾ ಜೊತೆ ಮುಖ್ಯ ಪಾತ್ರ ವಹಿಸಿದ್ದರು. ನಾ.ಸು.ಹರ್ಡಿಕರ ಅವರ ಜೊತೆಗೆ ಸೇರಿ ಕಾಂಗ್ರೆಸ್ ಸೇವಾದಳ ಸಂಘಟಿಸಲು ದುಡಿದಿದ್ದರು. ವಿಶೇಷವಾಗಿ ಯುವಕರ ನಡುವೆ ಕೋಮುವಾದದ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದರು.