ಕರಾವಳಿಸುಳ್ಯ

ಪುಸ್ತಕ ಜ್ಞಾನದ ಸಂಕೇತ,ಓದುವ ಹವ್ಯಾಸ ಬೆಳೆಸಿಕೊಳ್ಳಿ, ಓದುವುದಕ್ಕೆ ಇತರರನ್ನು ಪ್ರೇರೇ ಪಿಸಿ:ಡಾ.ಪ್ರಭಾಕರ ಶಿಶಿಲ

ನ್ಯೂಸ್ ನಾಟೌಟ್ : ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಸಹಯೋಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಜ್ಜನೋತ್ಸವ ಮತ್ತು ಸಜ್ಜನ ಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸಜ್ಜನ ಪ್ರತಿಷ್ಠಾನ ಸಭಾಭವನ ಗೂನಡ್ಕದಲ್ಲಿ ನಡೆಯಿತು.

ಸಜ್ಜನೋತ್ಸವ ಸಜ್ಜನ ಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ವಿದ್ವಾಂಸ ಡಾ.ಪ್ರಭಾಕರ ಶಿಶಿಲರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು “ಪುಸ್ತವೇ ಜ್ಞಾನದ ಭಂಡಾರ.ಪ್ರತಿಯೊಬ್ಬ ವ್ಯಕ್ತಿಯನ್ನು ಮಾದರಿ ವ್ಯಕ್ತಿಯನ್ನಾಗಿಸುವುದೇ ಪುಸ್ತಕ. ಒಬ್ಬ ಸಾಹಿತಿ ಕೇವಲ ಪುಸ್ತಕ ಬರೆದರೆ ಸಾಲದು. ಅದರ ಬಗ್ಗೆ ಅರಿತು,ಕಲಿತು ಇತರರಿಗೆ ತಿಳುವಳಿಕೆ ನೀಡಬೇಕು. ಪುಸ್ತಕಗಳು  ಮಾನಸಿಕವಾಗಿ ಜ್ಞಾನ ಭಂಡಾರ ಬೆಳೆಸುವ ಮತ್ತು ಪ್ರಾಪಂಚಿಕ ಜ್ಞಾನ ಅರಿಯುವ ಒಂದು ಉತ್ತಮ ಸಾಧನ. ಜ್ಞಾನದ ಹಸಿವು ನೀಗಿಸುವ ಸಾಮರ್ಥ್ಯ ಪುಸ್ತಕಗಳಿಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರು ದಾಮೋದರ ಮಾಸ್ಟರ್ ಕೆ. ಅವರನ್ನು ಸಜ್ಜನ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಹಾಗೂ ಇತರ ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಜ್ಜನವಾಣಿ ಬಿಡುಗಡೆ ಮತ್ತು ಬಹುಮಾನ ವಿತರಣೆ ಕೂಡ ನಡೆಯಿತು.ವರ್ತಕ ಸಂಘದ ಆಧ್ಯಕ್ಷ ಪಿ. ಬಿ ಸುಧಾಕರ ರೈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.ಸಜ್ಜನ ಪ್ರತಿಷ್ಟಾನ ಬೀಜದ ಕಟ್ಟೆ ಇದರ ಅಧ್ಯಕ್ಷರಾದ ಉಮ್ಮರ್ ಬೀಜದ ಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಸಂತೋಷ್ ಕುತ್ತಮೊಟ್ಟೆ, ಚಿದಾನಂದ ಮಾಸ್ಟರ್, ಕೆ. ಆರ್. ಗಂಗಾಧರ್. ಕೆ. ವಿ. ಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಲೀಲಾಧರ್ ಡಿ.ವಿ, ಚಂದ್ರಶೇಖರ ಪೇರಾಲು, ಸಂಪಾಜೆ ಗ್ರಾಮಪಂಚಾಯಿತಿ ಅಧ್ಯಕ್ಷ ಜಿ. ಕೆ. ಹಮೀದ್ ಮತ್ತಿತರ ಗಣ್ಯರು ಉಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

Related posts

ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ನಿಧನ

ಮನೆಯ ಸಿಟೌಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ..! ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಆಚರಣೆ,ಗಮನ ಸೆಳೆದ ಪುಟಾಣಿ ಮಹಾಬಲಿ ಹಾಗೂ ವಾಮನ ವೇಷ