ಸುಳ್ಯ

ಸಜ್ಜನ ಡಾ. ಉಮ್ಮರ್ ಬೀಜದ ಕಟ್ಟೆಯವರಿಗೆ ವೃತ್ತಿ ಜೀವನದ ಬೆಳ್ಳಿ ಹಬ್ಬದ ಸಂಭ್ರಮ, ಬೆಂಗಳೂರಿನಲ್ಲಿ ಗೌರವ ಸನ್ಮಾನ

ನ್ಯೂಸ್ ನಾಟೌಟ್: ಸಾಮಾಜಿಕ ಕಳಕಳಿಯಿಂದ ಜನರಿಗೆ ಹತ್ತಿರವಾಗಿರುವ ಸಜ್ಜನ ಪ್ರತಿಷ್ಠಾನದ ‘ಸಜ್ಜನ’ ನಾಯಕ ಡಾ. ಉಮ್ಮರ್ ಬೀಜದ ಕಟ್ಟೆಯವರು ವೃತ್ತಿ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿದ್ದಾರೆ.

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಬಯೋ ಪ್ಲಸ್ ಸೈನ್ಸ್‌ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಹೇಮಂತ್ ಪಟೇಲ್ ಅವರು ಡಾ. ಉಮ್ಮರ್ ಬೀಜದ ಕಟ್ಟೆಯವರನ್ನು ಗೌರವಿಸಿದರು. ಕಳೆದ ಹಲವಾರು ವರ್ಷಗಳಿಂದ ಡಾ. ಉಮ್ಮರ್ ಬೀಜದ ಕಟ್ಟೆ ಅವರು ಕನ್ನಡ, ನಾಡು, ನುಡಿಯ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಸೇವೆ ಮಾಡಿಕೊಂಡು ಬಂದಿದ್ದಾರೆ. ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮಾನವ ಸಂಪನ್ಮೂಲ ಹಿರಿಯ ವ್ಯವಸ್ಥಾಪಕ ಉದಯ್ ಕುಮಾರ್, ಪವನ್ ಕುಮಾರ್, ರಾಧಾಕೃಷ್ಣ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ನಿರ್ದೇಶಕ ಅಯ್ಯೂಬ್ ಗೂನಡ್ಕ , ಮಂಜುನಾಥ್ ಹಿರಿಯೂರು ಹಾಜರಿದ್ದರು.

Related posts

ಸುಳ್ಯ: ಕಾಲು ಜಾರಿ ಬಾವಿಯೊಳಗೆ ಬಿದ್ದ ಶಾಂತಿನಗರದ ಯುವಕ..! ಉಬರಡ್ಕಕ್ಕೆ ತೋಟದ ಕೆಲಸಕ್ಕೆಂದು ಹೋಗಿದ್ದಾಗ ದುರ್ಘಟನೆ..

ಪ್ರಕೃತಿಯೊಂದಿಗೆ ಸಕಲ ಜೀವರಾಶಿಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಉರಗ ತಜ್ಞ ತೇಜಸ್ ಪುತ್ತೂರು

ಮಜಾಭಾರತ ಖ್ಯಾತಿಯ ಜಗ್ಗಪ್ಪ-ಸುಶ್ಮಿತಾಗೆ ಡಿವೋರ್ಸ್? ಆ್ಯಂಕರ್ ಅನುಶ್ರೀ ಬಳಿ ಜಗ್ಗಪ್ಪ ಹೇಳಿದ್ದೇನು?