ನ್ಯೂಸ್ ನಾಟೌಟ್: ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪೂರ್ವ ತಯಾರಿ ನಡೆಸಲಾಯಿತು. ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳ ಆಯೋಜನೆ ನಡೆಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಸಲಾಯಿತು.
ಶಾಲಾ ಸಂಚಾಲಕರಾದ ರೆ.ಫಾ. ವಿಕ್ಟರ್ ಡಿಸೋಜ ರವರು ಬಹುಮಾನ ವಿತರಿಸಿದರು. ಸತೀಶ್ ಕುಮಾರ್ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ನವೀನ್ ಮಚಾದೊ, ಕಾರ್ಯದರ್ಶಿ ಜೂಲಿಯಾನ ಕ್ರಾಸ್ಥ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸಿ. ಅಂತೋನಿ ಮೇರಿ, ಸಿ . ಮೆಟ್ಟಿಲ್ದ, ಜೂಲಿಯಟ್ ಲೋಬೊ, ಶಾಂತಿ ಡಿಸೋಜ, ಮೇರಿ ಡಿಸೋಜ, ಶರ್ಮಿಳಾ, ರೇಷ್ಮಾ, ಅನಿತಾ ಮಸ್ಕರೇನ್ಹಸ್, ಕ್ರೈಸ್ತ ಶಿಕ್ಷಣ ಶಿಕ್ಷಕ ಶಿಕ್ಷಕಿಯರು ಹಾಜರಿದ್ದರು.
ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್ ಕಥೋಲಿಕ್ ಸಭಾ ಸುಳ್ಯ ಘಟಕದ ಭಾಷಣ ಸ್ಪರ್ಧೆಯು ಇತ್ತೀಚೆಗೆ ಸೈಂಟ್ ಜೋಸೆಫ್ ಮೆಸ್ ಹಾಲ್ ನಲ್ಲಿ ನಡೆಯಿತು. ಎರಡನೇ ತರಗತಿಯಿಂದ ಪಿಯುಸಿವರೆಗಿನ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಅಂತಿಮ ಫಲಿತಾಂಶ ಪ್ರಕಟವಾಗಿ ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಹಾಗೂ ಟ್ರೋಫಿಯನ್ನು ಸೈಂಟ್ ಬ್ರೆಜಿಡ್ಸ್ ಶಾಲಾ ಸಭಾಂಗಣದಲ್ಲಿ ರೆ.ಫಾ. ವಿಕ್ಟರ್ ಡಿಸೋಜ ಸಮ್ಮುಖದಲ್ಲಿ ಕಥೋಲಿಕ್ ಸಭಾ ಅಧ್ಯಕ್ಷ ಗಾಡ್ ಫ್ರೀ ಮೊಂತೆರೋ ವಿತರಿಸಿದರು.