ವೈರಲ್ ನ್ಯೂಸ್

ರಷ್ಯಾದ 8 ವರ್ಷದ ಬಾಲಕನಿಗೆ ಭಾರತದಲ್ಲಿ ಇಷ್ಟಲಿಂಗ ದೀಕ್ಷೆ..! ‘ಆ್ಯಂಡ್ರೆ’ ಗಣೇಶನಾಗಿ ಬದಲಾದದ್ದೇಕೆ?

ನ್ಯೂಸ್ ನಾಟೌಟ್: ರಷ್ಯಾದ (Russia) 8 ವರ್ಷದ ಬಾಲಕ ಕಾಶಿ ಪೀಠದ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದು ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಈ ಮೂಲಕ ಮಾಸ್ಕೋ ನಿವಾಸಿ ಪಾರ್ವತಿ ಎನ್ನುವವರ ಪುತ್ರ ಆ್ಯಂಡ್ರೆ ಎಂಬ 8 ವರ್ಷದ ಬಾಲಕ ಈಗ ದೀಕ್ಷೆ ಪಡೆದು ಗಣೇಶ ಎಂದು ಮರು ನಾಮಕರಣ ಮಾಡಲಾಗಿದೆ.

ಈ ಹಿಂದೆ ಉತ್ತರ ಕನ್ನಡ ಗೋಕರ್ಣದಲ್ಲಿ ಸಾವಿರಾರು ಜನರು ಕಾಶಿ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದರು. ಈ ವೇಳೆ ರಷ್ಯಾದ ಮಹಿಳೆ (ಬಾಲಕನ ತಾಯಿ) ಸಹ ವೀರಶೈವ ಧರ್ಮ ಸ್ವೀಕರಿಸಿದ್ದರು ಎನ್ನಲಾಗಿದೆ.

ಬಳಿಕ ಪಾರ್ವತಿ ಎಂದು ಹೆಸರು ಬದಲಾಯಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ. ಅವರು ಚಾಚು ತಪ್ಪದೆ ವೀರಶೈವ ಧರ್ಮವನ್ನು ಪಾಲಿಸುತ್ತಿದ್ದರು. ಅಲ್ಲದೇ ಇಷ್ಟಲಿಂಗ ಪೂಜೆಯನ್ನು ಸಹ ನಿತ್ಯವೂ ನಡೆಸುತ್ತಿದ್ದರು.

ಇದರಿಂದ ಮಗ ಕೂಡ ಪ್ರಭಾವಿತನಾಗಿದ್ದು, ಅವರಂತೆ ಇಷ್ಟಲಿಂಗ ಧರಿಸಲು ಬಯಸಿದ್ದ ಎನ್ನಲಾಗಿದೆ.ಅವನ ಇಷ್ಟದಂತೆ ಪಾಲಕರು ಆತನಿಗೆ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿದ್ದಾರೆ. ಬಳಿಕ ಆತನಿಗೆ ಮರು ನಾಮಕರಣ ಶ್ರೀ ಗಳಿಂದ ಆಶಿರ್ವಾದ ಪಡೆದಿರುವುದಾಗಿ ವರದಿ ತಿಳಿಸಿದೆ.

Related posts

ಜಲಾಂತರ್ಗಾಮಿ ನೌಕೆಗೆ ಡಿಕ್ಕಿ ಹೊಡೆದ 13 ಮಂದಿ ಇದ್ದ ಭಾರತೀಯ ಮೀನುಗಾರಿಕಾ ಹಡಗು..! ಇಬ್ಬರು ನಾಪತ್ತೆ..!

ಆಸ್ಪತ್ರೆಯ ಐಸಿಯುನಲ್ಲಿದ್ದ ಮೃತ ವ್ಯಕ್ತಿಯ ಎಡಗಣ್ಣು ಕಾಣೆ..! ಇಲಿಗಳನ್ನು ದೂರಿದ ವೈದ್ಯರು..!

ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕ್ರೂರಿ, ಬೆಚ್ಚಿಬಿದ್ದ ಜನತೆ! ಏನಿದು ವಿಚಿತ್ರ ದ್ವೇಷದ ಕಥೆ!