ಕರಾವಳಿ

ರೈಲಿನಲ್ಲಿ ಮಲಗಿಕೊಂಡೇ ರೊಮ್ಯಾನ್ಸ್ ಮಾಡಿದ ಪ್ರೇಮಿಗಳು, ತೀವ್ರ ಮುಜುಗರಕ್ಕೊಳಗಾದ ಸಹ ಪ್ರಯಾಣಿಕರು, ವಿಡಿಯೋ ವೀಕ್ಷಿಸಿ

ನ್ಯೂಸ್ ನಾಟೌಟ್: ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ರೊಮ್ಯಾನ್ಸ್ ಮಾಡಿ ಸಾರ್ವಜನಿಕರಿಗೆ ಮುಜುಗರ ತಂದಿರುವ ಹಲವಾರು ಸುದ್ದಿಗಳನ್ನು ನಾವು ಹಲವು ಸಲ ಓದಿರುತ್ತೇವೆ. ಇದೀಗ ರೈಲಿನಲ್ಲಿ ಪ್ರೇಮಿಗಳು ಮಲಗಿಕೊಂಡೇ ರೊಮ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋ ಎಲ್ಲಿಯದು ಎನ್ನುವುದು ಗೊತ್ತಿಲ್ಲ. ಆದರೆ ಈ ವಿಡಿಯೋದಲ್ಲಿರುವ ಜೋಡಿ ಚಲಿಸುತ್ತಿರುವ ರೈಲಿನಲ್ಲಿ ಮಲಗಿಕೊಂಡೇ ರೊಮ್ಯಾನ್ಸ್ ಮಾಡಿದ್ದಾರೆ. ನಾಲ್ಕು ಗೋಡೆಗಳ ನಡುವೆ ಗೌಪ್ಯವಾಗಿ ನಡೆಯಬೇಕಿದ್ದ ರೊಮ್ಯಾನ್ಸ್ ಬಹಿರಂಗವಾಗಿಯೇ ಪ್ರಯಾಣಿಕರ ಮುಂದೆಯೇ ನಡೆದಿದೆ. ಟಿಸಿ ಮುಜುಗರದಿಂದ ಎದುರಿಗೆ ಬಂದು ನಿಂತರೂ ಈ ಜೋಡಿ ಕ್ಯಾರೆ ಅನ್ನದೇ ರೊಮ್ಯಾನ್ಸ್ ಮುಂದುವರಿಸಿದೆ.

ಈ ಅಸಭ್ಯ ವರ್ತನೆಗೆ ಇದೀಗ ಎಲ್ಲ ಕಡೆಗಳಿಂದ ಟೀಕೆಗಳು ಕೇಳಿ ಬರುತ್ತಿವೆ. ಪಬ್ಲಿಕ್ ಹೀಗೆಲ್ಲ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಳಿ ಬರುತ್ತಿದೆ

ಈ ವಿಡಿಯೋ ಪಬ್ಲಿಷ್ ಆಗಿರುವ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. HasnaZarurihai ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಓಯೋ ಸೌಲಭ್ಯವು ಈಗ ಭಾರತೀಯ ರೈಲ್ವೆಯಲ್ಲಿಯೂ ಲಭ್ಯವಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಪ್ರೀತಿ ಕುರುಡು ಅಂತಾರೆ ಆದರೆ ಈ ತರಹದ ಕುರುಡು ಪ್ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬಂದರೆ ಧರ್ಮದೇಟು ಕೂಡ ಬೀಳಬಹುದು. ಇತ್ತೀಚೆಗೆ ಇಂತಹ ಸುದ್ದಿಗಳು ಹೆಚ್ಚು ಕೇಳಿ ಬರುತ್ತಿವೆ. ಲಜ್ಜೆಗೆಟ್ಟ ಜೋಡಿಗಳು ನಾಲ್ಕು ಕೋಣೆಯ ನಡುವಿನ ವಿಚಾರವನ್ನು ಪಾರ್ಕ್ ಗಳಲ್ಲಿಯೂ ನಡೆಸುವುದನ್ನು ಹಲವಾರು ಸಲ ನೋಡಿರುತ್ತೇವೆ. ಇದರಿಂದಾಗಿ ಮರ್ಯಾದಸ್ಥ ಜನರು ಪಾರ್ಕ್ ಕಡೆಗೆ ಹೋಗದಂತಾಗಿದೆ.

ಇಂತಹವರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ.

Related posts

ವಿಟ್ಲ: ಮನೆಯೊಳಗೆ ನುಗ್ಗಿ 1 ಲಕ್ಷ ರೂ. ಮೌಲ್ಯದ ವಾಚ್, ಡಿ.ವಿ.ಆರ್ ಕಳ್ಳತನ..! ಆರು ತಿಂಗಳ ಹಿಂದೆ ಗಲ್ಫ್ ಗೆ ಹೋಗಿದ್ದ ಮನೆ ಮಾಲಿಕ

ನಾಳೆ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ, ಪ್ರತಿಯೊಬ್ಬ ತಾಯಿಯೂ ತಜ್ಞ ವೈದ್ಯರ ಈ ಸಲಹೆಯನ್ನು ಪಾಲಿಸಬೇಕು ಏಕೆ ಗೊತ್ತಾ..?

ಉಡುಪಿ: ಮಾಜಿ ಕಾಂಗ್ರೆಸ್ ಶಾಸಕ ಯು.ಆರ್. ಸಭಾಪತಿ ಇನ್ನಿಲ್ಲ!