ಕ್ರೈಂವಿಡಿಯೋವೈರಲ್ ನ್ಯೂಸ್

ಚಲಿಸುತ್ತಿರುವ ಕಾರಿನಲ್ಲಿ ರೊಮ್ಯಾನ್ಸ್‌..! ಲಿಪ್‌ ಲಾಕ್‌ ವಿಡಿಯೋ ಎಲ್ಲೆಡೆ ವೈರಲ್

ನ್ಯೂಸ್ ನಾಟೌಟ್: ಹಲವು ಬಾರಿ ಸಂಚಾರಿ ನಿಯಮವನ್ನು ಉಲ್ಲಂಘಿಸಿ ತಮ್ಮ ಹುಚ್ಚಾಟಗಳಿಂದ ಪೊಲೀಸರಿಗೆ ಅತಿಥಿಯಾಗುತ್ತಾರೆ, ಅಂತಹದ್ದೇ ಘಟನೆ ಬೆಳಕಿಗೆ ಬಂದಿದ್ದು, ಚಲಿಸುತ್ತಿರುವ ಕಾರಿನ ಮೇಲೆ (ಸನ್‌ ರೂಫ್) ಕೂತು ಜೋಡಿಯೊಂದು ರೋಮ್ಯಾನ್ಸ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಹೈದರಾಬಾದ್‌ನಲ್ಲಿರುವ ಪಿವಿ ನರಸಿಂಹರಾವ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಜೋಡಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ.

ವೇಗವಾಗಿ ಚಲಿಸುತ್ತಿರುವ ಕಾರಿನ ಸನ್‌ ರೂಫ್ ಮೇಲೆ ಕೂತಿರುವ ಜೋಡಿಯೊಂದು ಪರಸ್ಪರ ಚುಂಬಿಸುತ್ತಿದ್ದು, ಲಿಪ್‌ ಲಾಕ್‌ ಮಾಡಿಕೊಂಡು ಹಾಯಾಗಿ ಹೋಗುತ್ತಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ಸಂಚಾರ ನಿಯಮವನ್ನು ಉಲ್ಲಂಘನೆ ಮಾತ್ರವಲ್ಲದೆ, ಸ್ವಲ್ಪ ತಪ್ಪಿದರೂ ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತಿತ್ತು ಎಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹೈದರಾಬಾದ್ ಪೊಲೀಸರು ಇಂತಹ ಅಜಾಗರೂಕ ಚಾಲನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೆಲವರು ಆಗ್ರಹಿಸಿದ್ದಾರೆ.

Related posts

ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಿಕ್ಷಕನ ವಿಶ್ರಾಂತಿ..! ವಿಡಿಯೋ ವೈರಲ್, ಶಿಕ್ಷಕ ಅಮಾನತ್ತು..!

ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಪತ್ತೆ..! ಕೇಂದ್ರ ಆರೋಗ್ಯ ಇಲಾಖೆ ಭಾರತದಲ್ಲಿ ನೀಡಿದ ಎಚ್ಚರಿಕೆ ಏನು?

ಬೆಳ್ತಂಗಡಿ: ಆಯತಪ್ಪಿ ನೇತ್ರಾವತಿ ನದಿಗೆ ಬಿದ್ದ RSS ಕಾರ್ಯಕರ್ತ..! ತಡರಾತ್ರಿ ಪ್ರಸಾದ್ ಮೃತದೇಹ ಮೇಲಕ್ಕೆತ್ತಿದ ಮುಳುಗು ತಜ್ಞರು