ಕ್ರೈಂದೇಶ-ವಿದೇಶ

ಹಾಡಹಗಲೇ ಬಂದೂಕು ಹಿಡಿದು ಚಿನ್ನದಂಗಡಿಗೆ ನುಗ್ಗಿದ ದರೋಡೆಕೋರರು ಮಾಡಿದ್ದೇನು..? ಇಲ್ಲಿದೆ ನೋಡಿ ಭಯಾನಕ ವಿಡಿಯೋ

ನ್ಯೂಸ್‌ನಾಟೌಟ್‌: ಸಿನಿಮೀಯಾ ರೀತಿಯಲ್ಲಿ ಹಾಡಹಗಲೇ ಚಿನ್ನದಂಗಡಿಗೆ ನುಗ್ಗಿದ ದರೋಡೆಕೋರರ ತಂಡವೊಂದು ಬಂದೂಕು ತೋರಿಸಿ ಚಿನ್ನಾಭರಣ ಲೂಟಿ ಮಾಡಿದ ಘಟನೆ ಪುಣೆಯ ಲಕ್ಷ್ಮಿ ಚೌಕ್ ಹಿಂಜೇವಾಡಿಯಲ್ಲಿ ನಡೆದಿದೆ.

ದರೋಡೆಕೋರರು ನಡೆಸಿದ ಕೃತ್ಯದ ದೃಶ್ಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದರೋಡೆಕೋರರು ಅಂಗಡಿಗೆ ನುಗ್ಗಿ ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ದರೋಡೆಕೋರರಲ್ಲಿ ಒಬ್ಬ ಅಂಗಡಿಯೊಳಗಿನ ವ್ಯಕ್ತಿಯ ಮೇಲೆ ಬಂದೂಕನ್ನು ಗುರಿಯಾಗಿಸಿಕೊಂಡರೆ, ಇನ್ನೊಬ್ಬ ವ್ಯಕ್ತಿಯ ಕಾಲರ್ ಹಿಡಿದು ಕೆಳಕ್ಕೆ ತಳ್ಳುತ್ತಾನೆ. ಮೂರನೆಯವ ಅಂಗಡಿಯೊಳಗೆ ಇದ್ದ ವಸ್ತುಗಳನ್ನು ಲೂಟಿ ಮಾಡುತ್ತಾನೆ. ನಂತರ, ಮೂವರು ಅಂಗಡಿಯಿಂದ ಎಸ್ಕೇಪ್‌ ಆಗುತ್ತಾರೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಅದರ ಆಧಾರದ ಮೇಲೆ ದರೋಡೆಕೋರರ ಪತ್ತೆಗಾಗಿ ಶೋಧ ಮುಂದುವರಿದಿದೆ.

Related posts

ಕರ್ನಾಟಕದ ವಕ್ಫ್ ಭೂ ವಿವಾದದ ಬೆನ್ನಲ್ಲೇ ‘ವಕ್ಫ್ ಬೋರ್ಡ್’ ಅನ್ನೇ ವಜಾಗೊಳಿಸಿದ ಆಂಧ್ರ ಸರ್ಕಾರ..! ಇಲ್ಲಿದೆ ಸಂಪೂರ್ಣ ಮಾಹಿತಿ

ಈ ದೇಶದಲ್ಲಿ ಹೆಣ್ಣುಮಕ್ಕಳ ವಿವಾಹದ ವಯಸ್ಸು 9 ವರ್ಷ..! ಹೊಸ ಮಸೂದೆಯ ವಿರುದ್ಧ ಜನಾಕ್ರೋಶ..!

ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ..! ರಸ್ತೆಗೆ ಉರುಳಿದ ಬೃಹತ್ ಬಂಡೆ..!