Uncategorized

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮನೆಯಲ್ಲಿ ಕಳ್ಳತನ..!70,000 ರೂ. ನಗದು ಮತ್ತು ಚಿನ್ನಾಭರಣ ದೋಚಿದ ಕಳ್ಳರು..!

ನ್ಯೂಸ್‌ ನಾಟೌಟ್‌: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್(Yuvraj Singh) ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ.ಈ ಬಗ್ಗೆ ಯುವರಾಜ್ ಸಿಂಗ್ ಅವರ ತಾಯಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೇ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಸುಮಾರು 70,000 ರೂ. ನಗದು ಮತ್ತು ಚಿನ್ನಾಭರಣ ಕಾಣೆಯಾಗಿದೆ ಎನ್ನಲಾಗಿದೆ.ಯುವ ರಾಜ್ ಸಿಂಗ್ ತಾಯಿ ಶಬ್ನಮ್ ಸಿಂಗ್ ಅವರು ತಮ್ಮ ಮನೆಯಲ್ಲಿದ್ದ 70,000 ಸಾವಿರ ನಗದು ಮತ್ತು ಚಿನ್ನಾಭರಣ ಕಾಣೆಯಾಗಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯೇ ಕಳ್ಳತನ ಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.ಸಿಬ್ಬಂದಿ ಸಾಕೇತ್ರಿಯ ಲಲಿತಾ ದೇವಿ, ಮನೆಕೆಲಸಕ್ಕಾಗಿ ಮತ್ತು ಅಡುಗೆ ಕೆಲಸಕ್ಕಾಗಿ ನೇಮಕಗೊಂಡ ಬಿಹಾರ ಮೂಲದ ವ್ಯಕ್ತಿ ಸಲೀಂದರ್ ದಾಸ್ ಕಳ್ಳತನ ಮಾಡಿರಬಹುದು ಎಂದು ಶಂಕಿಸಿದ್ದಾರೆ.

2023ರಲ್ಲಿ ಗುರುಗಾಂವ್‌ನಲ್ಲಿದ್ದಾಗ ಒಂದು ತಿಂಗಳು ತಾನು ಮನೆಯಲ್ಲಿ ಇರಲಿಲ್ಲ. ಹಾಗಾಗಿ ನಮ್ಮ ಮನೆಯ ಜವಾಬ್ದಾರಿಯನ್ನು ಆರೋಪಿಗಳಾಗಿರುವ ಮನೆಗೆಲಸದವರು ನೋಡಿಕೊಳ್ಳುತ್ತಿದ್ದರು. ನಂತರ ಇಬ್ಬರು ಆರೋಪಿಗಳು ಕೆಲಸವನ್ನು ಬಿಟ್ಟ ಆರು ತಿಂಗಳ ಬಳಿಕ ಮನೆಯಲ್ಲಿದ್ದ ಅಷ್ಟೂ ಚಿನ್ನ ಮತ್ತು ನಗದು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.

Related posts

ಮಾ.28 ರಿಂದ ಎಸ್‌ ಎಸ್ ಎಲ್ ಸಿ ಪರೀಕ್ಷೆ, ಹಿಜಾಬ್ ಧರಿಸಿದವರಿಗೆ ಪರೀಕ್ಷೆ ಇಲ್ಲ

ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ಖರೀದಿಗೆ ಅವಕಾಶ, ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್

ಹೆದರಿ ಮೈಕ್‌ಗೇ ಕಾಂಡೋಮ್ ಸುತ್ತಿದ TV ವರದಿಗಾರ್ತಿ!