ದೇಶ-ಪ್ರಪಂಚ

ರಣ ಭೀಕರ ಮಳೆಗೆ ಪ್ರವಾಹ ಸೃಷ್ಟಿ ,ಕಟ್ಟಡದಲ್ಲಿ ಸಿಲುಕಿದ್ದ 730 ವಿದ್ಯಾರ್ಥಿನಿಯರ ರಕ್ಷಣೆ,ರೋಚಕ ವಿಡಿಯೋ ಇಲ್ಲಿದೆ

ನ್ಯೂಸ್ ನಾಟೌಟ್ :ಭೀಕರ ಮಳೆಯಿಂದಾಗಿ ಹೆಚ್ಚಿನ ಕಡೆಗಳಲ್ಲಿ ಪ್ರವಾಹವೇರ್ಪಟ್ಟಿದ್ದು ಅನೇಕ ಕಡೆ ಭಾರಿ ಹಾನಿಯುಂಟಾಗಿದೆ. ಇದರ ಬೆನ್ನಲ್ಲೆ ಹರಿಯಾಣದ ಅಂಬಾಲಾದಲ್ಲಿ ಕಟ್ಟಡವೊಂದರಲ್ಲಿ ಸುಮಾರು 730 ವಿದ್ಯಾರ್ಥಿನಿಯರು ಸಿಲುಕಿದ್ದ ಘಟನೆ ನಡೆದಿತ್ತು.ಇದನ್ನು ಸ್ಥಳೀಯರು ಮನಗಂಡು ಅಲ್ಲಿನ ಎನ್‌ಡಿಆರ್‌ಎಫ್, ಪೊಲೀಸರು ಮತ್ತು ಸೇನೆಯು ಜಂಟಿಯಾಗಿ ರಕ್ಷಿಸಿದ್ದು ಭಾರಿ ಶ್ಲಾಘನೆ ವ್ಯಕ್ತವಾಗಿದೆ.

ಚಮನ್ ವಾಟಿಕಾ ಕನ್ಯಾ ಗುರುಕುಲದ 730 ವಿದ್ಯಾರ್ಥಿನಿಯರನ್ನು ರಕ್ಷಿಸಲು ಹರಸಾಹಸ ಪಟ್ಟರು.ಪಂಜಾಬ್ ಮತ್ತು ಹರಿಯಾಣದಾದ್ಯಂತ ಭಾರೀ ಮಳೆಯು ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ಅಲ್ಲದೇ, ಇಲ್ಲಿನ ತೀವ್ರ ಜಲಾವೃತದಿಂದಾಗಿ ರೈಲ್ವೇ ಹಳಿಗಳು ನೀರಿನ ಅಡಿಯಲ್ಲಿ ಸಿಲುಕಿದ್ದು, ಹಲವಾರು ರೈಲು ರದ್ದಾಗಿರುವ ಘಟನೆ ಕೂಡ ವರದಿಯಾಗಿದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಉತ್ತರ ಭಾಗದ ಬಹುತೇಕ ರಾಜ್ಯಗಳು ತತ್ತರಿಸಿವೆ.ಜನ ಕಂಗಾಲಾಗಿದ್ದಾರೆ.ಜನ ಜೀವನ ಅಸ್ತವ್ಯಸ್ತ ಗೊಂಡಿವೆ.ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು,ಇವರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಪ್ರವಾಹಗಳು ರಣ ಭೀಕರವಾಗಿದ್ದು, ಭಾರಿ ಆತಂಕವನ್ನೇ ಸೃಷ್ಟಿಸಿದೆ. ಹಿಮಾಚಲ, ಉತ್ತರಾಖಂಡ, ದೆಹಲಿ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ದೇಶಾದ್ಯಂತ ಮಳೆಯಿಂದಾಗಿ ಈವರೆಗೆ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಭೂಕಂಪ ಪೀಡಿತ ಟರ್ಕಿ, ಸಿರಿಯಾದಲ್ಲಿನ ಎನ್‌ಡಿಆರ್‌ಎಫ್ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಕಾರು ಉತ್ಪನ್ನ ಮಾರುಕಟ್ಟೆಯ ದಿಗ್ಗಜ ಮಾರುತಿ ಸುಜುಕಿಗೆ 200 ಕೋಟಿ ರೂ.ದಂಡ..!

200 ಮಂದಿ ಪಾಕಿಸ್ತಾನಿಗಳು ಇಂದು(ಮೇ.3) ರಾಮಮಂದಿರಕ್ಕೆ ಭೇಟಿ..! ಏನಿದು ವಿಶೇಷ..?