Uncategorized

ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ‘ಕಾಂತಾರ’ ಮತ್ತಷ್ಟು ಹತ್ತಿರ

ನ್ಯೂಸ್ ನಾಟೌಟ್ : ಯಶಸ್ಸಿನ ಅಲೆಯಲ್ಲಿ ಮಿಂದೆದ್ದು ಆಸ್ಕರ್ ಪ್ರಶಸ್ತಿಯ ಕದ ತಟ್ಟಿದ ‘ಕಾಂತಾರ’ ಸಿನಿಮಾ ತಂಡಕ್ಕೆ ಮತ್ತೊಂದು ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ.  ಈ ಬಾರಿಯ ಆಸ್ಕರ್ ಪ್ರಶಸ್ತಿಯ(Oscar award) ಉತ್ತಮ ಚಿತ್ರ ಮತ್ತು ಉತ್ತಮ ನಟ ಸ್ಪರ್ಧಾ ಪಟ್ಟಿಯ ಮುಖ್ಯ ವಿಭಾಗದಲ್ಲಿ ಕಾಂತಾರ ಪ್ರವೇಶ ಪಡೆದಿದೆ. ಇತರ 301 ಚಿತ್ರಗಳ ಜೊತೆ ಕಾಂತಾರ ಮುಂದಿನ ಹಂತದಲ್ಲಿ ಸೆಣೆಸಲಿದೆ. 

2023ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಜನವರಿ 24ರಂದು ಘೋಷಣೆಯಾಗಲಿದೆ. ಕಾಂತಾರ ಚಿತ್ರ ಈ ಬಾರಿಯ ಆಸ್ಕರ್ ಪ್ರಶಸ್ತಿ ಗೆಲ್ಲುವ ಸಾಧ್ಯತೆಗಳು, ನಿರೀಕ್ಷೆಗಳು ಹೆಚ್ಚಾಗಿವೆ. ಆಸ್ಕರ್ ಪ್ರಶಸ್ತಿಯ ಪಟ್ಟಿಯಲ್ಲಿ ಎರಡು ವಿಭಾಗದಲ್ಲಿ ಅರ್ಹತೆ ಪಡೆದಿರುವ ಸುದ್ದಿ ಕೇಳಿ ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿ ಇಡೀ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ.

Related posts

18 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ

ಸುಳ್ಯ: ಶಾರದಾಂಬ ಉತ್ಸವ ಭಜನಾ ಕುಣಿತದ ವೇಳೆ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಹಾವಿನ ರಕ್ಷಣೆ..!, ವಾಹನ-ಜನ ದಟ್ಟಣೆಯ ನಡುವೆಯೂ ಒಂದು ಜೀವ ಉಳಿಸಿದ್ರು..!

ರಸ್ತೆಯ ಚರಂಡಿಗೆ ಬಿದ್ದು 2 ವರ್ಷದ ಮಗು ಸಾವು..! ಇಲ್ಲಿದೆ ಮನಕಲಕುವ ಘಟನೆ