ಜೀವನಶೈಲಿ

ಮಹಿಳೆಯರೇ ಗಮನಿಸಿ,ನೀವು ಎಂದಿಗೂ ಈ ತಪ್ಪನ್ನು ಮಾಡಲೇ ಬಾರದು…

ನ್ಯೂಸ್ ನಾಟೌಟ್ :ಮಹಿಳೆ ಬಯಸಿದರೆ ಯಾವ ಮನೆ ಕೂಡ ಸ್ವರ್ಗವಾಗಬಹುದು. ಓರ್ವ ವ್ಯಕ್ತಿಯ ಸಂತೋಷ ಮತ್ತು ಸಮೃದ್ಧಿ ಅವನ ಮನೆಯಲ್ಲಿರುವ ಮಹಿಳೆಯರ ಮೇಲೆ ಅವಲಂಬಿಸಿರುತ್ತದೆ. ಮಹಿಳೆಯರನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಆಕೆ ಬಯಸಿದರೆ ಯಾವ ಮನೆಯು ಕೂಡ ಸಮೃದ್ಧಿಯಿಂದ ಕೂಡಿರಬಹುದು.ಇಲ್ಲವೇ ನರಕವನ್ನಾಗಿಸಲೂಬಹುದು.ಹಾಗಾಗಿ ಮನೆಯ ಮಹಿಳೆಯರು ಎಂದಿಗೂ ಈ ತಪ್ಪುಗಳನ್ನು ಮಾಡಲೇ ಬಾರದು.

  • ತಲೆಯ ಕೂದಲನ್ನು ಬಿಟ್ಟುಕೊಂಡು ಅಡುಗೆ ಮನೆಗೆ ಪ್ರವೇಶವನ್ನು ಮಾಡಬಾರದು ಹಾಗೂ ಅಡುಗೆಯನ್ನು ಮಾಡಬಾರದು ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ . ನೀವು ಮಾಡುವಂತಹ ಅಡುಗೆಯನ್ನು ಸೇವಿಸುವ ವ್ಯಕ್ತಿಗಳಿಗೆ ಯಶಸ್ಸು ಸಿಗುವುದಿಲ್ಲ .
  • ಜೀವನದಲ್ಲಿ ಎಷ್ಟೇ ಕಷ್ಟಗಳು ಇದ್ದರು, ಎಷ್ಟೇ ನೋವು ಮನಸ್ಸಲ್ಲಿ ಇದ್ದರು ಕೂಡ ಮನೆಯ ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಕುಳಿತುಕೊಂಡು ಕಣ್ಣೀರು ಹಾಕಬಾರದು. ಹೀಗೆ ಮಾಡಿದರೆ ನಿಮ್ಮನ್ನು ಕಷ್ಟಗಳು ಬಿಡುವುದಿಲ್ಲ . ನಿಮ್ಮಿಂದ ಮನೆಯಲ್ಲಿರುವವರಿಗೆಲ್ಲರಿಗೂ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಮನೆಯ ಯಜಮಾನಿ ನಗುನಗುತ್ತಾ ಇದ್ರೆ ಸುತ್ತ ಮುತ್ತ ಇರುವವರಿಗೂ ವಿಶೇಷವಾದ ಫಲಗಳು ಸಿಗುತ್ತದೆ .
  • ಅಡುಗೆ ಕೋಣೆಯಲ್ಲಿ ನೀವು ಅಡುಗೆ ಮಾಡಿದ ನಂತರ ಪಾತ್ರೆಯಲ್ಲಿ ಇರುವ ಆಹಾರ ಪದಾರ್ಥಗಳು ಖಾಲಿಯಾದ ಮೇಲೆ ಯಾವುದೇ ಕಾರಣಕ್ಕೂ ಖಾಲಿ ಪಾತ್ರೆಗಳನ್ನ ಗ್ಯಾಸ್ ಸ್ಟವ್ ಅಥವಾ ಒಲೆಯ ಮೇಲೆ ಹಾಗೆಯೆ ಇಡುವುದಕ್ಕೆ ಹೋಗಬಾರದು . ಹೀಗೆ ಮಾಡಿದರೆ ಲಕ್ಷ್ಮಿ ದೇವಿಯ ಅನುಗ್ರಹದ ಜೊತೆಗೆ ಅನ್ನಪೂರ್ಣ ದೇವಿಯ ಆಶೀರ್ವಾದ ಕಡಿಮೆಯಾಗುತ್ತಾ ಹೋಗುತ್ತದೆ.
  • ಅಡುಗೆ ಮನೆಯಲ್ಲಿ ಕತ್ತರಿಸಿದ ತರಕಾರಿ ಹಣ್ಣುಗಳ ಸಿಪ್ಪೆಯನ್ನು ಅಲ್ಲಿಯೇ ಬಿಡಬಾರದು. ಅವುಗಳನ್ನು ತಕ್ಷಣ ಹೊರಗೆ ಹಾಕಬೇಕು. ಇಲ್ಲದಿದ್ದರೆ ಮನೆಯ ಸದಸ್ಯರ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
  • ಯಾವುದೇ ಮಹಿಳೆಯು ಪೊರಕೆಯನ್ನು ಕಾಲಲ್ಲಿ ಮುಟ್ಟುವ ಮನೆಯಲ್ಲಿ ಅಥವಾ ಕಾಲಿನಿಂದ ಪೊರಕೆಯನ್ನು ಒದೆಯುವ ಮನೆಯಲ್ಲಿ ಎಂದಿಗೂ ಲಕ್ಷ್ಮಿ ದೇವಿಯು ವಾಸವಾಗಿರಲಾರಳು. ಪೊರಕೆಯನ್ನು ಕಾಲಿನಿಂದ ಮುಟ್ಟುವುದರಿಂದ ಲಕ್ಷ್ಮಿ ದೇವಿಯು ಕೋಪಿಸಿಕೊಳ್ಳುವಳು. ಮಹಿಳೆಯರ ಈ ಅಭ್ಯಾಸದಿಂದ ಲಕ್ಷ್ಮಿ ದೇವಿಯು ಮನೆಯಿಂದ ಹೊರನಡೆಯುವಳು.
  • ಮಹಿಳೆಯರಿಗೆ ಒಲೆಯ ಮೇಲೆ ಏನಾದರೂ ಪಾತ್ರೆಯಿಟ್ಟು ಮಲಗುವ ಅಭ್ಯಾಸವಿರುತ್ತದೆ. ಅಥವಾ ಒಲೆಯನ್ನು ಹೊತ್ತಿಸಿ ಪಾತ್ರೆಯನ್ನಿಡದೇ ಬೆಂಕಿಯನ್ನು ವ್ಯರ್ಥ ಮಾಡುತ್ತಿರುತ್ತಾರೆ. ಅಥವಾ ರಾತ್ರಿ ವೇಳೆ ಒಲೆಯ ಮೇಲೆ ಪಾತ್ರೆಯನ್ನಿಟ್ಟು ಮಲಗುತ್ತಾರೆ. ಈ ಅಭ್ಯಾಸವಿರುವ ಮಹಿಳೆಯರ ಮನೆಗೆ ಎಂದಿಗೂ ಲಕ್ಷ್ಮಿ ದೇವಿಯು ಬರುವುದಿಲ್ಲ. ಲಕ್ಷ್ಮಿ ಯಾವ ಮನೆಗೆ ಬರುವುದಿಲ್ಲವೋ ಆ ಮನೆಯಲ್ಲಿ ಬಡತನ ಉಂಟಾಗುತ್ತದೆ.
  • ನಿಮ್ಮ ಮನೆಯ ಮಹಿಳೆಯರು ಹೊಸ್ತಿಲಿನ ಮೇಲೆ ಕುಳಿತು ಊಟ ಮಾಡುತ್ತಿದ್ದರೆ ಆಕೆಯನ್ನು ಮೊದಲು ಹೊಸ್ತಿಲಿನಿಂದ ಎದ್ದೇಳಿಸಿ ಬೇರೆಡೆ ಕುಳಿತು ಊಟ ಮಾಡಲು ಸಲಹೆ ನೀಡಿ. ಮನೆಯ ಮಹಿಳೆಯು ಹೊಸ್ತಿಲಿನ ಮೇಲೆ ಕುಳಿತು ಆಹಾರವನ್ನು ತಿನ್ನುತ್ತಿದ್ದರೆ, ಊಟ ಮಾಡುತ್ತಿದ್ದರೆ ಅದು ಆ ಮನೆಯ ಸಂಪೂರ್ಣ ಸದಸ್ಯರ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.
  • ರಾತ್ರಿ ವೇಳೆ ತಿಂದ ಪಾತ್ರೆಗಳನ್ನು ತೊಳೆಯದೆ ಹಾಗೇ ಇಡಬಾರದು. ರಾತ್ರಿ ಊಟದ ನಂತರ ಎಲ್ಲಾ ಪಾತ್ರೆಗಳನ್ನು ತೊಳೆದು ಶುದ್ಧವಾಗಿಡಬೇಕು. ಒಂದು ವೇಳೆ ರಾತ್ರಿ ಪಾತ್ರೆಗಳನ್ನು ತೊಳೆಯದೇ ಹಾಗೇ ಮಲಗಿದರೆ ಆ ಮನೆಯಲ್ಲಿ ಬಡತನ ಮನೆಮಾಡುತ್ತದೆ. ಯಾವುದೇ ಮನೆಯಲ್ಲಾಗಲಿ ಇದನ್ನು ಸಂಭವಿಸಲು ಬಿಡದಿರಿ. ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ಸ್ವಚ್ಛಗೊಳಿಸಿ ನಂತರ ಮಲಗಿ
    • ಮಹಿಳೆಯರೆಂದರೆ ಮುಂಜಾನೆ ಬೇಗ ಎದ್ದು ಶುಚಿಯಾಗಿ, ರಂಗೋಲಿಯನ್ನಿಟ್ಟು ದೇವರ ಪೂಜೆಯನ್ನು ಮಾಡಬೇಕು. ಮಹಿಳೆಯರು ಮುಂಜಾನೆ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಮತ್ತು ಬೇಗ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದು ಅವರ ಆರೋಗ್ಯಕ್ಕೂ ಒಳ್ಳೆಯದು ಮತ್ತು ಮನೆಯ ಸಮೃದ್ಧಿಗೂ ಕೂಡ ಒಳ್ಳೆಯದು.
    • ಯಾವ ಮನೆಯಲ್ಲಿ ಮಹಿಳೆಯು ಮುಂಜಾನೆ ಬೇಗ ಎದ್ದು ಶುಚಿಯಾಗಿ ಅಂಗಳವನ್ನು ಸ್ವಚ್ಛಗೊಳಿಸುತ್ತಾಳೋ ಆ ಮನೆಗೆ ಮಾತ್ರ ಲಕ್ಷ್ಮಿ ದೇವಿಯು ಆಗಮಿಸುತ್ತಾಳೆ. ಇಲ್ಲವಾದರೆ ಆಕೆ ಆ ಮನೆಯ ಹೊಸ್ತಿಲ ಬಳಿ ಕೂಡ ನಿಲ್ಲುವುದಿಲ್ಲ.

Related posts

ತಾಯಿ-ಮಗನನ್ನು ಒಂದುಗೂಡಿಸಿದ ಪ್ರವಾಹ..!,35 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದು ಹೇಗೆ?

ಚಳಿಗಾಲದಲ್ಲಿ ಹೃದಯಘಾತಕ್ಕೆ ಕಾರಣವಾಗುವ ಆಹಾರ ಯಾವುದು? ಇಲ್ಲಿದೆ ಮಾಹಿತಿ..

ಕೇರಳದಲ್ಲಿ ‘ವೆಸ್ಟ್ ನೈಲ್’ ಜ್ವರದಿಂದ ಓರ್ವ ಮೃತ್ಯು..! ಕರ್ನಾಟಕದ ಗಡಿಭಾಗದಲ್ಲಿ ಆರೋಗ್ಯ ಇಲಾಖೆಯಿಂದ ತೀವ್ರ ಕಟ್ಟೆಚ್ಚರ..!