ದೇಶ-ವಿದೇಶವೈರಲ್ ನ್ಯೂಸ್

ರತನ್ ಟಾಟಾ ಕುಟುಂಬಕ್ಕೆ ನನ್ನ ಸಂತಾಪ ತಿಳಿಸಿ ಎಂದು ಮೋದಿಗೆ ಮನವಿ ಮಾಡಿದ ಇಸ್ರೇಲ್ ಪ್ರಧಾನಿ, ಭಾರತದ ಹೆಮ್ಮೆಯ ಪುತ್ರ ರತನ್ ಟಾಟಾ ಎಂದ ಬೆಂಜಮಿನ್ ನೆತನ್ಯಾಹು

ನ್ಯೂಸ್ ನಾಟೌಟ್: ಭಾರತೀಯ ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು(ಅ.13) ಸಂತಾಪ ಸೂಚಿಸಿದ್ದಾರೆ. ಟಾಟಾ ಗ್ರೂಪ್‌ ನ ಮಾಜಿ ಅಧ್ಯಕ್ಷ ರತನ್ ಟಾಟಾ ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಮ್ಮ 86 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂತಾಪ ಸೂಚಿಸಿ ಫೋಸ್ಟ್ ಮಾಡಿರುವ ನೆತನ್ಯಾಹು, ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ರತನ್ ಟಾಟಾ ನೀಡಿದ ಕೊಡುಗೆಗಳನ್ನು ಉಲ್ಲೇಖಿಸಿದ್ದಾರೆ.

ನನ್ನ ಗೆಳೆಯ ಹಾಗು ಪ್ರಧಾನಿ ನರೇಂದ್ರ ಮೋದಿ ಅವರೇ, ರತನ್ ಟಾಟಾರ ನಿಧನಕ್ಕೆ ನಾನು ಮತ್ತು ಇಸ್ರೇಲ್‌ ಜನರು ಶೋಕ ವ್ಯಕ್ತಪಡಿಸುತ್ತಿದ್ದೇವೆ. ಅವರು ಭಾರತದ ಹೆಮ್ಮೆಯ ಪುತ್ರ. ಉಭಯ ದೇಶಗಳ ಸ್ನೇಹ ಬಾಂಧವ್ಯ ವೃದ್ಧಿಗೆ ಕೆಲಸ ಮಾಡಿದ ಚಾಂಪಿಯನ್ ಎಂದು ತಿಳಿಸಿದ್ದಾರೆ. ಇದೇ ವೇಳೆ, ಟಾಟಾ ಅವರ ಕುಟುಂಬಕ್ಕೆ ತಮ್ಮ ಸಂತಾಪಗಳನ್ನು ತಿಳಿಸುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ರತನ್ ಟಾಟಾ ನಮ್ಮ ದೇಶದ ನಿಜವಾದ ಗೆಳೆಯ ಎಂದು ಕಳೆದ ಗುರುವಾರ ಸಿಂಗಾಪುರ ಪ್ರಧಾನಿ ಲಾರೆನ್ಸ್‌ ವಾಂಗ್ ಬಣ್ಣಿಸಿದ್ದರು. ಅದೇ ರೀತಿ, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರಾನ್ ಸಂತಾಪ ವ್ಯಕ್ತಪಡಿಸುತ್ತಾ, ರತನ್ ಟಾಟಾ ಅವರು ನಾವೀನ್ಯತೆ ಮತ್ತು ಕೈಗಾರಿಕೋತ್ಪಾದನೆಗೆ ನೀಡಿದ ಕೊಡುಗೆಗಳನ್ನು ಶ್ಲಾಘಿಸುತ್ತಾ, ಭಾರತ-ಫ್ರಾನ್ಸ್‌ ನಡುವಿನ ಸಂಬಂಧ ಬಲಪಡಿಸುವಲ್ಲಿ ಅವರ ಪಾತ್ರವನ್ನು ಸ್ಮರಿಸಿದ್ದರು.

Click

https://newsnotout.com/2024/10/baby-the-inspector-adopted-the-baby-found-in-the-bush/
https://newsnotout.com/2024/10/sanjay-datt-in-kateel-durgaparameshwari-temple/
https://newsnotout.com/2024/10/vijayadashami-kannada-news-bjp-leader-distributed-sowrd-to-girls/
https://newsnotout.com/2024/10/9-year-old-girl-nomore-kannada-news-deva-guli/
https://newsnotout.com/2024/10/mangaluru-passport-issue-bangla-man-arrested-link-with-udupi/
https://newsnotout.com/2024/10/durga-pooje-navaratri-kannada-news-ladies-misbehaviour/

Related posts

ಖ್ಯಾತ ನಟಿ ಜಯಪ್ರದಾ ನಾಪತ್ತೆಯಾದ್ರಾ..? ಯುಪಿ ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ಹುಡುಕಾಟ ನಡೆಸುತ್ತಿರುವುದೇಕೆ? ರಾಜಕೀಯ ಪ್ರವೇಶಿಸಿದ್ದ ಈ ನಟಿಗೇನಾಯ್ತು?

ಡೆಂಗ್ಯೂ ಬಗ್ಗೆ ರೀಲ್ಸ್ ಮಾಡಿದ್ರೆ 1 ಲಕ್ಷ ರೂಪಾಯಿ ಬಹುಮಾನ..! ಏನಿದು ಹೊಸ ಅಭಿಯಾನ..? ನೀವು ಭಾಗವಹಿಸ್ಬಹುದಾ..?

ಕೇದಾರನಾಥ ಸಮೀಪ ಭೀಕರ ಭೂಕುಸಿತ..! ಮೂವರು ಸಾವು, ಹಲವರಿಗೆ ಗಂಭೀರ ಗಾಯ