ದೇಶ-ಪ್ರಪಂಚ

ಯಾವುದೇ ಕ್ಷಣದಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ..ಯುದ್ಧದ ಭೀತಿ

ಮಾಸ್ಕೋ: ನೆರೆ ರಾಷ್ಟ್ರ ಉಕ್ರೇನ್ ವಿರುದ್ಧ ದಾಳಿ ನಡೆಸುವುದಕ್ಕೆ ರಷ್ಯಾ ಅಂತಿಮ ಸಿದ್ಧತೆಗಳನ್ನು ನಡೆಸಿಕೊಂಡಿದ್ದು ಇದೀಗ ಯುದ್ಧದ ಭೀತಿ ನಿರ್ಮಾಣಗೊಂಡಿದೆ. ಮೂಲಗಳ ಪ್ರಕಾರ ರಷ್ಯಾ ತನ್ನ ಸೇನೆಯ ಪೈಕಿ ಶೇ 70 ರಷ್ಟನ್ನು ಉಕ್ರೇನ್ ಗಡಿಗೆ ಕಳುಹಿಸಿಕೊಟ್ಟಿದೆ ಎಂದು ಅಮೆರಿಕ ಗುಪ್ತಚರ ಇಲಾಖೆಗಳು ತಿಳಿಸಿವೆ.

ಈಗಾಗಲೇ ರಷ್ಯಾ ಸೇನೆ ಉಕ್ರೇನ್ ಗಡಿಯಲ್ಲಿ ಒಂದು ಲಕ್ಷದಷ್ಟು ಸೈನ್ಯವನ್ನು ಜಮಾವಣೆ ಮಾಡಿದೆ. ಅಪಾರ ಪ್ರಮಾಣದ ಶಸ್ತ್ರಾಗಳೂ ಇವೆ. ಮುಂದಿನ ಕೆಲವು ದಿನಗಳಲ್ಲಿ ಇಲ್ಲಿ ಮೈ ಕೊರೆಯುವ ಚಳಿ ಎದುರಾಗಲಿದೆ. ಅಂತಹ ಸಮಯದಲ್ಲಿ ರಷ್ಯಾ ತನ್ನ ಸೇನಾ ಬಲವನ್ನು ಹೆಚ್ಚಿಸಲು ನೆರವು ನೀಡಲಿದೆ ಎಂದು ಹೇಳಲಾಗುತ್ತಿದೆ.

ಎರಡೂ ರಾಷ್ಟ್ರಗಳ ನಡುವೆ ಯಾವುದೇ ಸಂದರ್ಭದಲ್ಲಿ ಯುದ್ಧವಾಗಬಹುದು. ರಷ್ಯಾ ಮುಗಿಬಿದ್ದು ದಾಳಿ ನಡೆಸುವುದಕ್ಕೆ ಅಂತಿಮ ತಯಾರಿ ನಡೆಸಿಕೊಂಡಿದೆ. ಮೇಲಾಧಿಕಾರಿಗಳ ಆರ್ಡರ್ ಸಿಕ್ಕಿದ ಕೂಡಲೇ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ರಷ್ಯಾ ದಾಳಿ ನಡೆಸಿದ್ದೇ ಆದರೆ ಸುಮಾರು ಐವತ್ತು ಸಾವಿರ ಅಮಾಯಕ ನಾಗರಿಕರು ಪ್ರಾಣ ಕಳೆದುಕೊಳ್ಳುವ ಅಪಾಯವಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ವರದಿ ನೀಡಿದೆ.

ಈ ನಡುವೆ ಸಂಭವನೀಯ ಯುದ್ಧದ ವೇಳೆ ರಷ್ಯಾದ ಮೇಲೆ ಪ್ರತಿ ದಾಳಿ ನಡೆಸಲು ಸೇನೆಯನ್ನು ಕಳುಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ. ಹೀಗಿದ್ದರೂ ನ್ಯಾಟೋ ಪಡೆಯ ಬಾಧ್ಯತೆಯನ್ನು ಪೂರೈಸುವ ಸಲುವಾಗಿ 2 ಸಾವಿರ ಯೋಧರನ್ನು ಯುರೋಪ್‌ಗೆ ಅಮೆರಿಕ ರವಾನಿಸಿದೆ. ಅವರು ಜರ್ಮನಿ ಮತ್ತು ಪೋಲೆಂಡ್‌ಗೆ ಬಂದು ಇಳಿದಿದ್ದಾರೆ ಎಂದು ಸೇನೆ ತಿಳಿಸಿದೆ.

ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ನಾಲ್ಕು ಕಾರಣ?

  • ಸೋವಿಯ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ಯುರೋಪ್ ಒಕ್ಕೂಟದತ್ತ ವಾಲುತ್ತಿರುವುದು ರಷ್ಯಾ ಕೋಪವನ್ನು ನೆತ್ತಿಗೇರಿಸಿದೆ.
  • ಉಕ್ರೇನ್‌ಗೆ ನ್ಯಾಟೋದ ಪಾಲುದಾರ ಸ್ಥಾನಮಾನ ಪ್ರಸ್ತಾಪಕ್ಕೆ ರಷ್ಯಾದ ತೀವ್ರ ವಿರೋಧ, ಪ್ರಸ್ತಾಪ ಹಿಂಪಡೆವAತೆ ಬೆದರಿಕೆ
  • ಉಕ್ರೇನ್‌ಗೆ ನ್ಯಾಟೋ ದೇಶಗಳು ಶಸ್ತ್ರಾಸ್ತ್ರ ಮತ್ತು ಇತರೆ ಮಿಲಿಟರಿ ನೆರವು ನೀಡುತ್ತಿರುವುದನ್ನು ರಷ್ಯಾ ವಿರೋಧಿಸುತ್ತಲೇ ಬಂದಿದೆ.
  • ಉಕ್ರೇನ್‌ನಲ್ಲಿ ತನ್ನ ಕೈಗೊಂಬೆ ಸರಕಾರ ರಚಿಸುವ ರಷ್ಯಾ ಪ್ರಯತ್ನಕ್ಕೆ ಅಮೆರಿಕ, ಯುರೋಪ್ ಅಡ್ಡಗಾಲು ಪ್ರಯತ್ನ.

Related posts

ಮಟನ್ ಪೀಸ್‌ ಹೆಚ್ಚಿಗೆ ಹಾಕುವಂತೆ ಗ್ರಾಹಕನ ಕಿರಿಕ್..! ಕೈಯಲ್ಲಿದ್ದ ಮಟನ್ ಕತ್ತರಿಸುವ ಕತ್ತಿಯಿಂದ ತಲೆಗೆ ಹೊಡೆದ 16ರ ಬಾಲಕ..!

ಹಿಂದೂ ಯುವಕನನ್ನು ಅಡ್ಡಗಟ್ಟಿ ನಾಯಿಯಂತೆ ಬೊಗಳು ಎಂದು ಹಿಂಸೆ ಕೊಟ್ಟ ಮುಸ್ಲಿಂ ಯುವಕರು! ಯುವಕ ಬಿಚ್ಚಿಟ್ಟ ರಹಸ್ಯವೇನು? ಇಲ್ಲಿದೆ ವೈರಲ್ ವಿಡಿಯೋ

ಚುನಾವಣಾ ಫಲಿತಾಂಶ ನೋಡುತ್ತಲ್ಲೇ ಆಕ್ರೋಶಗೊಂಡು ಟಿ.ವಿ ಒಡೆದು ಹಾಕಿದ ರಾಷ್ಟ್ರೀಯ ಹಿಂದೂ ಪರಿಷತ್‌ ಅಧ್ಯಕ್ಷ..! ಇಲ್ಲಿದೆ ವೈರಲ್ ವಿಡಿಯೋ