ಕ್ರೈಂ

ಕಡಬ: ಅಪ್ರಾಪ್ತ ಬಾಲಕಿಯ ಪ್ಯಾಂಟ್ ಜಾರಿಸಿ ರೇಪ್ ಗೆ ಯತ್ನ, ಪೋಕ್ಸೋ ಪ್ರಕರಣ ದಾಖಲು

350
Spread the love

ಕಡಬ: ಅಪ್ರಾಪ್ತ  ಬಾಲಕಿಯೊಂದಿಗೆ   ಅಸಭ್ಯವಾಗಿ ವರ್ತಿಸಿದ  ವ್ಯಕ್ತಿ  ಹಾಗೂ ಆತನ ಪತ್ನಿಯ ವಿರುದ್ದ ಕಡಬ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಯುವತಿಯು ತೋಟದಲ್ಲಿ ನೀರು ಹಾಯಿಸುವ ಸಲುವಾಗಿ ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ವೇಳೆ  ಜಾನ್ ಎಂಬಾತ ಬಂದು  ತಲೆಗೆ ಕೈಯಿಂದ ಹೊಡೆದು  ನಾನು ರೇಪ್ ಮಾಡುತ್ತೇನೆಂದು ನೀನು ಪ್ರಚಾರ ಪಡಿಸಿದ್ದು, ಈಗ ರೇಪ್ ಮಾಡಿ ತೋರಿಸುತ್ತೇನೆ ಎಂದು ಹೇಳಿ ಪ್ಯಾಂಟ್ ಜಾರಿಸಲು ಯತ್ನಿಸಿರುವುದಾಗಿ  ದೂರಿನಲ್ಲಿ ಆರೋಪಿಸಲಾಗಿದೆ. ಸುದ್ದಿ ತಿಳಿದು  ತೋಟಕ್ಕೆ ಬಂದಿದ್ದ   ಬಾಲಕಿಯ ಅಜ್ಜಿ ಮರಿಯಮ್ಮ ಎಂಬವರಿಗೂ ಹಲ್ಲೆ ಮಾಡಿದಲ್ಲದೆ,   ಆರೋಪಿಯ ಪತ್ನಿಯೂ ಯುವತಿಗೆ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಯುವತಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು  ದೂರಿನ ಆಧಾರದಲ್ಲಿ ಕಡಬ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  'ಈತ ಮದುವೆಗೆ ಬಂದರೆ ಒದ್ದು ಹೊರ ಹಾಕಿ' ಎಂದು ಮದುವೆ​​ ಕಾರ್ಡ್​​ನಲ್ಲಿ ಬರೆಸಿದ ಮದುಮಗ..! ಏನಿದು ವೈರಲ್ ಆಮಂತ್ರಣ ಪತ್ರಿಕೆ..?
  Ad Widget   Ad Widget   Ad Widget   Ad Widget   Ad Widget   Ad Widget