ಕೊಡಗು

ಕೊಡಗಿನ ಚೆಲ್ವೆ ರಶ್ಮಿಕಾಳಿಂದ ಮತ್ತೊಂದು ಕಿರಿಕ್ ,ಸೌತ್​ನಿಂದ ಬೈಕಾಟ್​ ಮಾಡುವಂತೆ ನೆಟ್ಟಿಗರು ಹೇಳುತ್ತಿರುವುದೇಕೆ? ಅಷ್ಟಕ್ಕೂ ನಟಿ ಹೇಳಿದ್ದೇನು?

ನ್ಯೂಸ್ ನಾಟೌಟ್‌: ನಟಿ ರಶ್ಮಿಕಾ ಮಂದಣ್ಣ ಏನಾದರೊಂದು ಕಿರಿಕ್ ಮಾಡುತ್ತಲೇ ಇರುತ್ತಾರೆ.ಈ ಹಿಂದೆಯೇ ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿಂದೆ ಕನ್ನಡ ಚಿತ್ರೋದ್ಯಮದ ಜೊತೆ ಕಿರಿಕ್​ ಮಾಡಿಕೊಂಡಿದ್ದ ರಶ್ಮಿಕಾಗೆ ಇದಾಗಲೇ ಕನ್ನಡ ಚಲನಚಿತ್ರೋದ್ಯಮವು ನಿಷೇಧಿಸಿದೆ. ಈಗ  ಟಾಲಿವುಡ್ ಕೂಡ ಇದೇ ರೀತಿ ಮಾಡಬೇಕು. ಈಕೆ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ದಕ್ಷಿಣವೇ ಈಕೆಯ ಬೇರು. ಆದರೆ  ತನ್ನ ಸಕ್ಸಸ್​ ಅಡಿಪಾಯವನ್ನು ಈಕೆ ಗೌರವಿಸುತ್ತಿಲ್ಲ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕೂಗು ಕೇಳಿ ಬಂದಿದೆ.  

ಅಷ್ಟಕ್ಕೂ ರಶ್ಮಿಕಾ ಸೌತ್​ನವರ ಕೆಂಗಣ್ಣಿಗೆ ಗುರಿಯಾಗುತ್ತಿರುವುದಕ್ಕೆ ಕಾರಣವೂ ಇದೆ. ಬಾಲಿವುಡ್​ಗೆ ಕಾಲಿಡುತ್ತಿದ್ದಂತೆಯೇ ಮತ್ತೆ  ದಕ್ಷಿಣ ಭಾರತದ ಚಲನಚಿತ್ರಗಳ ಬಗ್ಗೆ ಕಿರಿಕ್​ ಮಾಡಿಕೊಂಡಿದ್ದಾರೆ ನಟಿ. ಇದು ನೆಟ್ಟಿಗರನ್ನು ಹಾಗೂ ಸೌತ್​ ಇಂಡಸ್ಟ್ರಿಯನ್ನು ಕೆರಳಿಸಿದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಸಿನಿಮಾದ ಕುರಿತು ಮಾತನಾಡುತ್ತಿದ್ದ ವೇಳೆ ಅವರು ಆಡಿರುವ ಮಾತುಗಳಿಗೆ ಜನರು ಕಿಡಿಕಿಡಿಯಾಗುತ್ತಿದ್ದಾರೆ. ಅಷ್ಟಕ್ಕೂ ನಟಿ ಹೇಳಿದ್ದೇನೆಂದರೆ,  ಬಾಲಿವುಡ್‌ನಲ್ಲಿ ರೊಮ್ಯಾಂಟಿಕ್ ಹಾಡುಗಳಿಗೆ ಅವಕಾಶವಿದೆ. ಇದೊಂದು ಒಳ್ಳೆಯ ಸಂಪ್ರದಾಯ ಕೂಡ.  ಆದರೆ ದಕ್ಷಿಣದಲ್ಲಿ ಹಾಗಿಲ್ಲ. ಅಲ್ಲಿ ಏನಿದ್ದರೂ ಕೇವಲ ಮಸಾಲೆ ಹಾಡುಗಳು ಮತ್ತು ಐಟಂ ಸಾಂಗ್​ಗಳು. ಇವೇ ಹೆಚ್ಚಾಗಿವೆ ಎಂದಿದ್ದಾರೆ.  

ಮಿಷನ್​ ಮಜ್ನು ಚಿತ್ರದಲ್ಲಿ ನನ್ನ ಇಷ್ಟದ ರೊಮ್ಯಾಂಟಿಕ್​ ಹಾಡಿಗೆ ಅವಕಾಶ ಸಿಕ್ಕಿದೆ. ಆದರೆ ದಕ್ಷಿಣದಲ್ಲಿ ಇಂಥ ಹಾಡುಗಳೇ ಇಲ್ಲ. ಅಲ್ಲಿ ಏನಿದ್ದರೂ  ಮಾಸ್ ಮಸಾಲಾ ಹಾಡುಗಳು, ಐಟಂ ಸಾಂಗ್​ಗಳು ಮತ್ತು ಡ್ಯಾನ್ಸ್​ಗಳೇ ಹೆಚ್ಚಾಗಿವೆ.  ‘ಮಿಷನ್ ಮಜ್ನು’ ಚಿತ್ರದ ನನ್ನ ಮೊದಲ ಬಾಲಿವುಡ್ ರೊಮ್ಯಾಂಟಿಕ್ ಹಾಡಿಗೆ ನರ್ತಿಸಲು ನಾನು   ಉತ್ಸುಕಳಾಗಿದ್ದೇನೆ.  ಏಕೆಂದರೆ ಇದು ನನಗೆ ತುಂಬಾ ಇಷ್ಟ. ಸೌತ್​ನಲ್ಲಿ ಇಂಥ ಅವಕಾಶಗಳೇ ಸಿಗಲಿಲ್ಲ ಎಂದಿದ್ದಾರೆ ರಶ್ಮಿಕಾ.

Related posts

ಕೊಡಗಿನಲ್ಲಿ ಮತ್ತೆ ಹುಲಿರಾಯನ ಅಟ್ಟಹಾಸ, ಎರಡು ಹಸು ಬಲಿ

ಮಡಿಕೇರಿ: ಇಬ್ಬರ ಕಾರನ್ನು ಅಡ್ಡಗಟ್ಟಿ ಬರೋಬ್ಬರಿ 50 ಲಕ್ಷ ರೂ. ದರೋಡೆ..!,ಮಲೆಯಾಳಂ ಮಾತನಾಡುತ್ತಿದ್ದ ಆ ದುಷ್ಕರ್ಮಿಗಳು ಯಾರು?

ಸುಳ್ಯ: ಯಶಸ್ವಿ 2 ನೇ ವ‍ರ್ಷಕ್ಕೆ ಪಾದಾರ್ಪಣೆಗೈದ ‘ಗೋಕುಲಂ’ ವಸ್ತ್ರ ಮಳಿಗೆ,’ಬಿಗ್ ಡಿಸ್ಕೌಂಟ್ ಮೇಳ’ದಲ್ಲಿ ಆಕರ್ಷಕ ದರದಲ್ಲಿ ಮುದ್ದು ಮಕ್ಕಳ ಬಟ್ಟೆಗಳು ಲಭ್ಯ