ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋದ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್ : ಸ್ಯಾಂಡಲ್​ವುಡ್​ ನಟ ರಕ್ಷಿತಾ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದುಬಿದ್ದ ವಿಚಾರ ಭಾರೀ ಚರ್ಚೆ ಆಗಿತ್ತು. ಬ್ರೇಕಪ್ (Breakup)​ ಬಳಿಕ ಇಬ್ಬರು ಮುಖಾಮುಖಿಯಾಗಿಲ್ಲ. ಅಷ್ಟೇ ಅಲ್ಲ ನಿಶ್ಚಿತಾರ್ಥ ಕ್ಯಾನ್ಸಲ್ ಆಗಲು ಕಾರಣ ಕೂಡ ತಿಳಿಸಿಲ್ಲ. ಈಗಲೂ ಅಭಿಮಾನಿಗಳು ಇಬ್ಬರ ಬ್ರೇಕಪ್​ಗೆ ನಾನಾ ಕಾರಣ ಹುಡುಕುತ್ತಿದ್ದಾರೆ. ಆದರೆ ಈಗ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಎಡಿಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ನಟ ರಕ್ಷಿತ್ ಶೆಟ್ಟಿ (Rakshit Shetty) ಪ್ರತಿಕ್ರಿಯೆ ನೀಡಿದ್ದು, ಯೂಟ್ಯೂಬ್ ಚಾನೆಲ್ ವೊಂದರ ಜೊತೆ ಮಾತನಾಡಿದಾಗ, ‘ಯಾವ ನಟಿಯದ್ದೂ ಹಾಗೆ ಆಗಬಾರದು. ಇಂತಹ ಪ್ರಕರಣಗಳಿಗೆ ಸರಕಾರ ಬೇಗ ಸ್ಪಂದಿಸಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ವಿಡಿಯೋ ವೈರಲ್ ಆಗುವ ಮುಂಚೆಯೇ ಕ್ರಮಕ್ಕೆ ಮುಂದಾಗಬೇಕು’ ಎಮದು ಹೇಳಿದ್ದಾರೆ.
ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್ ಆಗಿತ್ತು, ಈ ಹಿಂದೆಯೂ ಇವರ ಇಂಥದ್ದೇ ವಿಡಿಯೋ ಶೇರ್ ಆಗಿ ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಡಿಯೋ ಕುರಿತು ದೂರು ದಾಖಲಾಗಿದ್ದರೂ, ಮತ್ತೊಂದು ಡೀಪ್‌ಫೇಕ್ ವಿಡಿಯೋವನ್ನು ಅನಾಮದೇಯರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಕುರಿತು ಅನೇಕರು ವಿರೋಧ ವ್ಯಕ್ತ ಪಡಿಸಿದ್ದರು.
ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ (Deepfake) ಎಐ-ರಚಿಸಿದ ವೀಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಳೆದ ಶುಕ್ರವಾರ ಎಫ್‌ಐಆರ್‌ ದಾಖಲಿಸಿದ್ದಾರೆ. ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು ಎಂದು ವರದಿ ಹೇಳಿದೆ.

Related posts

ಕಾವು: ಕಾರುಗಳ ನಡುವೆ ಭೀಕರ ಅಪಘಾತ, ಕೊಡಗಿನ ಯುವಕ ಬಲಿ

Yuvarajkumar Divorce: ದೊಡ್ಮನೆಗೂ ತಟ್ಟಿದ ಡಿವೋರ್ಸ್‌ ಪಿಡುಗು..! ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ ಯುವರಾಜ್‌ ಕುಮಾರ್..!

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ನುಗ್ಗಿದ ಆಂಬ್ಯುಲೆನ್ಸ್..! ರಸ್ತೆ ಬದಿಯಲ್ಲಿ ನಿಂತಿದ್ದ ಶಾಲಾ ಮಕ್ಕಳು ಅಪಾಯದಿಂದ ಪಾರು..!