ಕ್ರೈಂ

ಕಾವು: ಕಾರುಗಳ ನಡುವೆ ಭೀಕರ ಅಪಘಾತ, ಕೊಡಗಿನ ಯುವಕ ಬಲಿ

336
Spread the love

ಪುತ್ತೂರು: ಇಲ್ಲಿನ ಮಾಣಿ-ಮೈಸೂರು ಹೆದ್ದಾರಿಯಲ್ಲಿನ ಕಾವು ಸಮೀಪದ ಮಡ್ಯಂಗಳ ಎಂಬಲ್ಲಿ ನಡೆದ ಕಾರುಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಕೊಡಗಿನ ಭಾಗಮಂಡಲ ಸಮೀಪದ ಚೆಟ್ಟಿಮಾನಿಯ ಯುವಕ ಸಾವಿಗೀಡಾದ ಘಟನೆ ನಡೆದಿದೆ.

ಮೃತರನ್ನು ಚೆಟ್ಟಿಮಾನಿ ನಿವಾಸಿ ಪೊನ್ನಟ್ಟಿ ಜಯಕುಮಾರ ಮತ್ತು ನವೀನ ದಂಪತಿಗಳ ಪುತ್ರ ರಾಜೀವ್ ( 31 ) ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ಪುತ್ರಿಯೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದರು. ಇತ್ತೀಚೆಗಷ್ಟೇ ಹೊಸ ಮನೆಯನ್ನು ಚೆಟ್ಟಿಮಾನಿಯಲ್ಲಿ ಕಟ್ಟಿಸಿದ್ದರು. ಘಟನೆಯಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

See also  ಸುಳ್ಯ: ಆನೆಗುಂಡಿ ಚೆಡಾವಿನಲ್ಲಿ ನಿಯಂತ್ರಣ ತಪ್ಪಿದ ಇನ್ನೋವಾ ಕಾರು, ಸ್ವಲ್ಪದರಲ್ಲೇ ಭಾರಿ ಅಪಾಯದಿಂದ ಪಾರಾದ ಚಾಲಕ
  Ad Widget   Ad Widget   Ad Widget   Ad Widget   Ad Widget   Ad Widget