ದೇಶ-ಪ್ರಪಂಚ

ರಾತ್ರೋ ರಾತ್ರಿ ಸೆಲೆಬ್ರಿಟಿಯಾದ ರಾನು ಮಂಡಲ್ ಸಿನಿಮಾ ಶೀಘ್ರದಲ್ಲೇ ತೆರೆಗೆ

ಕೋಲ್ಕತ್ತ: ರೈಲ್ವೇ ಸ್ಟೇಶನ್ ನಲ್ಲಿ ಕುಳಿತು ಹಾಡು ಹಾಡುತ್ತಿದ್ದ ರಾನು ಮಂಡಲ್ ರಾತ್ರೋರಾತ್ರಿ ಸೆಲೆಬ್ರಿಟಿಯಾದ ಕಥೆ ನಿಮ್ಗೆ ಗೊತ್ತೆ ಇದೆ. ಮಾತ್ರವಲ್ಲ ಇದೀಗ ಮತ್ತೆ ಈ ಹಿಂದಿನ ವೃತ್ತಿಯನ್ನೇ ಮಾಡುತ್ತಿದ್ದಾರೆ ಎಂಬ ಮಾಹಿತಿಯು ಹರಿದಾಡುತ್ತಿತ್ತು. ಇದೀಗ ಗಾಯಕಿ ರಾನು ಮಂಡಲ್ ಅವರ ಕುರಿತಾದ ಜೀವನ ಚರಿತ್ರೆಯ ಸಿನಿಮಾವಾಗಿ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದೆ.

2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ರಾನು ಮಂಡಲ್ ʼತೆರಿ ಮೇರಿ ಕಹಾನಿʼ ಹಾಡಿನ ಮೂಲಕ ಖ್ಯಾತಿ ಗಳಿಸಿದ್ದರು. ಇನ್ನು ರಾನು ಮಂಡಲ್ ಪಾತ್ರದಲ್ಲಿ ಇಶಿಕಾ ಡೇ ಕಾಣಿಸಿಕೊಳ್ಳುತ್ತಿದ್ದು. ಚಿತ್ರಕ್ಕಾಗಿ ಇಶಿಕಾ ಸಿಕ್ಕಾಪಟ್ಟೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಈ ಕುರಿತಾಗಿ ನಟಿ ಇಶಿಕಾ ಮಾತನಾಡಿದ್ದು, ನಾನು ಈ ಪಾತ್ರಕ್ಕಾಗಿ ಕಷ್ಟಪಟ್ಟು ಡಯಟ್ ಮಾಡುತ್ತಿದ್ದೇನೆ. ಮೊದಲಿನಿಂದಲೂ ಬಗೆ ಬಗೆಯ ಅಡುಗೆ ಮಾಡುವುದರಲ್ಲಿ ಹಾಗೂ ವಿವಿಧ ಖಾದ್ಯಗಳನ್ನು ಸವಿಯುದರಲ್ಲಿ ತುಂಬಾ ಆಸಕ್ತಿ ಹೊಂದಿರುವ ನಾನು  ಈ ಸಿನಿಮಾಕ್ಕಾಗಿ  ಎರಡು ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳುವ ಗುರಿ ಹೊಂದಿದ್ದೇನೆ” ಎಂದು ಹೇಳಿದ್ದಾರೆ.

ಈ ನಡುವೆ ಈ ಸಿನಿಮಾ  ಮುಂಬರುವ 2022 ರ ಹೊತ್ತಿಗೆ ತೆರೆಮೇಲೆ ಬರಲಿದ್ದು, ಸಿನಿಮಾವನ್ನು ರಣಘಾಟ್, ಕೋಲ್ಕತ್ತಾ, ಮುಂಬೈ ಸೇರಿದಂತೆ  ರಾನು ಮಂಡಲ್ ಅವರ ನಿಜ ಜೀವನದ ಸ್ಥಳಗಳಲ್ಲಿಯೇ ಚಿತ್ರೀಕರಿಸಲು ಚಿತ್ರತಂಡ ತಯಾರಿ ನಡೆಸಿದೆ ಎನ್ನಲಾಗಿದೆ. ಅಂದ ಹಾಗೆ ರಾನು ಮಂಡಲ್ ಬಯೋಪಿಕ್ ಸಿನಿಮಾಗೆ ‘ಮಿಸ್ ರಾನು ಮಾರಿಯಾ’ ಎಂದು ಟೈಟಲ್ ಇಡಲಾಗಿಯಂತೆ.ಎಲ್ಲವೂ ಅಂದು ಕೊಂಡಂತೆ ಆದರೆ ಚಿತ್ರವು ಸದ್ಯದಲ್ಲೇ ತೆರೆ ಮೇಲೆ ಬರಲಿದೆ.

Related posts

‘ಇಂಡಿಯಾ’ ಬದಲಿಗೆ ‘ರಿಪಬ್ಲಿಕ್ ಆಫ್ ಭಾರತ್’..! ದೇಶದ ಹೆಸರು ಬದಲಿಸಲಿದೆಯೇ ಕೇಂದ್ರ? ಅಸ್ಸಾಂ ಸಿಎಂ ನೀಡಿದ ಸುಳಿವೇನು? ಈ ಹಿಂದೆ ಈ ಬಗ್ಗೆ ಸುಪ್ರೀಂ ಕೋರ್ಟ್ ಏನು ಹೇಳಿತ್ತು?

ಕರಾವಳಿಗೆ ಪ್ರಚಾರ ಸಭೆಗೆ ಬರಲಿದ್ದಾರೆ ಮೋದಿ, ಯೋಗಿ

ಆಕೆಯನ್ನು ಕೊಲೆಗೈದು ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ಅತ್ತೆ ಮಾವನಿಗೆ ಬಡಿಸಿದ..! ಇಲ್ಲಿದೆ ವಿಚಿತ್ರ ಸೈಕೋ ಕಿಲ್ಲರ್ ಸ್ಟೋರಿ!