ಕ್ರೈಂ

ಟೋಲ್‌ ವಿಷಯದಲ್ಲಿ ವಿವಾದ; ಟೋಲ್‌ ಸಿಬ್ಬಂದಿಯನ್ನೇ ಹಾಕಿ ಸ್ಟಿಕ್‌ನಲ್ಲಿ ಹೊಡೆದು ಕೊಂದ ಪಾಪಿಗಳು..!

ನ್ಯೂಸ್‌ ನಾಟೌಟ್‌: ರಾಮನಗರ ‌ತಾಲೂಕಿನ ಶೇಷಗಿರಿಹಳ್ಳಿ‌ ಟೋಲ್ ಪ್ಲಾಜಾದಲ್ಲಿ ಭಾನುವಾರ ರಾತ್ರಿ ಟೋಲ್ ಪಡೆಯುವ ವಿಚಾರಕ್ಕೆ ಆರಂಭವಾದ ಗಲಾಟೆ ಯುವಕನ ಕೊಲೆಯೊಂದಿಗೆ ಅಂತ್ಯವಾಗಿದೆ.

ಮೃತ ಯುವಕನನ್ನು ತಾವರೆಕೆರೆ ಸಿಕ್ಕೆಪಾಳ್ಯ ನಿವಾಸಿ ಪವನ್ ನಾಯಕ್(26) ಎಂದು ಗುರುತಿಸಲಾಗಿದೆ. ಈತ ರಾಮನಗರ ‌ತಾಲೂಕಿನ ಶೇಷಗಿರಿಹಳ್ಳಿ‌ ಟೋಲ್ ಪ್ಲಾಜಾದಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ ಬೆಂಗಳೂರು ಮೂಲದ ಯುವಕರ ಗುಂಪು ಹಣದ ವಿಚಾರವಾಗಿ ಟೋಲ್​ನಲ್ಲಿ ಕೆಲಸ ಮಾಡುತ್ತಿದ್ದ ಪವನ್ ನಾಯಕ್ ಜತೆಗೆ ನಿನ್ನೆ ರಾತ್ರಿ ಗಲಾಟೆ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಹೊಡೆದಾಟ ನಡೆದಿದೆ. ಇದನ್ನೇ ಗುರಿಯಾಗಿಸಿಕೊಂಡ ಯುವಕರ ತಂಡ ಪವನ್‌ ಕೆಲಸ ಮುಗಿಸಿ ಊಟಕ್ಕೆ ಹೋಗಿದ್ದಾಗ ಬೆನ್ನಟ್ಟಿ ಹಾಕಿ ಸ್ಟಿಕ್​ನಿಂದ ಹೊಡೆದು ಹೆಜ್ಜಲ ಸಮೀಪ ಕೊಲೆ ಮಾಡಿ ಪರಾರಿಯಾಗಿದೆ. ಮೃತದೇಹವನ್ನು ಬೆಂಗಳೂರು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ದಾಖಲಿಸಿರುವ ಬಿಡದಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Related posts

ದೇವಾಲಯದ ಆವರಣದಲ್ಲೇ ಮಾಂಸಾಹಾರ ಸೇವನೆ ..! ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂದು ಫಲಕ ಅಳವಡಿಸಲು ಹೈ ಕೋರ್ಟ್ ಸೂಚನೆ

ನೆಲ್ಯಾಡಿ: ಭೀಕರ ಅಪಘಾತಕ್ಕೆ ಮಹಿಳೆ ಸಾವು, ಪತಿ, ಪುತ್ರ ಗಂಭೀರ!

ಬೆಳ್ತಂಗಡಿ:1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವು..! ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು